ದೇವರೆಂದರೆ ಭಯ, ಭಕ್ತಿ ಇರಲಿ

 ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು. ರಾಮು ಗುಡಿಭಟ್ಟ, ವೆಂಕಟೇಶ್, ಎಚ್.ಕೆ.ಯೋಗೇಶ್, ರಾಮೇಗೌಡ, ರಾಮಚಂದ್ರು, ರಂಗಸ್ವಾಮಿ, ಅಣ್ಣಪ್ಪಸ್ವಾಮಿಗೌಡ ಇತರರಿದ್ದರು.
ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು. ರಾಮು ಗುಡಿಭಟ್ಟ, ವೆಂಕಟೇಶ್, ಎಚ್.ಕೆ.ಯೋಗೇಶ್, ರಾಮೇಗೌಡ, ರಾಮಚಂದ್ರು, ರಂಗಸ್ವಾಮಿ, ಅಣ್ಣಪ್ಪಸ್ವಾಮಿಗೌಡ ಇತರರಿದ್ದರು.
Published on

ಹಿರೀಸಾವೆ: ಮನುಕುಲವು ಭಯ-ಭಕ್ತಿಯಿಂದ ಬದುಕಲೆಂದು ದೇಗುಲ ನಿರ್ಮಿಸಲಾಗುತ್ತಿದೆಯೇ ಹೊರತು ದೇವರಿಗೆ ನೆಲೆ ಕಲ್ಪಿಸಬೇಕು ಎಂದಲ್ಲ ಎಂದು ಶ್ರೀ ಗದ್ದೆರಾಮೇಶ್ವರ ದೇಗುಲದ ಅರ್ಚಕ ರಾಮು ಗುಡಿಭಟ್ಟ ಅಭಿಪ್ರಾಯಪಟ್ಟರು.

ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ ಸಮಿತಿ ವತಿಯಿಂದ 35 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಕಾರ್ಯಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.

ಭೂಮಿಯ ಮೇಲಿನ ಪ್ರತಿಯೊಂದು ವಸ್ತು ಹಾಗೂ ಕಣಕಣದಲ್ಲಿಯೂ ದೇವರಿದ್ದಾನೆ. ಆದರೆ ಪೂಜಿಸಲೆಂದು ನಿರ್ದಿಷ್ಟ ಸ್ಥಳ ಗುರುತಿಸುವ ಸಲುವಾಗಿ ದೇಗುಲವನ್ನು ನಿರ್ಮಿಸಲಾಗುತ್ತದೆ ಎಂದರು.

ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷಎಚ್.ಕೆ.ಯೋಗೇಶ್ ಮಾತನಾಡಿ, ಊರು, ಜನತೆ ನಿಮ್ಮದಿ ಮತ್ತು ಕ್ಷೇಮದಿಂದ ಇರಬೇಕೆಂದರೆ ಗ್ರಾಮಗಳಲ್ಲಿರುವ ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳು ಸುರಕ್ಷಿತ ಹಾಗೂ ಸುಂದರವಾಗಿರಬೇಕು ಎಂದರು.

ವಿಶೇಷ ಕಳಶ ಪ್ರತಿಷ್ಠಾಪನೆಯೊಂದಿಗೆ ತಳಹದಿ ಪೂಜೆ ನೆರವೇರಿಸಿ ದೇವರ ಮೂಲೆಯಲ್ಲಿ ಅಡಿಗಲ್ಲು ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕರಾದ ರಂಗಯ್ಯ, ವೆಂಕಟೇಶ್ ಹಾಗೂ ವರದರಾಜು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥರಾದ ಎಚ್.ಎಸ್.ವೆಂಕಟೇಶ್, ಎಚ್.ಕೆ.ಯೋಗೇಶ್, ಪ್ರಮುಖರಾದ ಗೌಡಪ್ಪರ ರಾಮೇಗೌಡ, ರಾಮಚಂದ್ರು, ಎಚ್.ಬಿ.ರಂಗಸ್ವಾಮಿ, ಎಚ್.ಪಿ.ಅಣ್ಣಪ್ಪಸ್ವಾಮಿಗೌಡ, ಮಹೇಶ್, ಬಾಲಕೃಷ್ಣ, ರಘು ಇತರರು ಇದ್ದರು. ದೇಗುಲ ಜೀರ್ಣೋದ್ಧಾರಕ್ಕೆ ಧನ ಸಹಾಯ ಅಥವಾ ಭಕ್ತಿ ಸಮರ್ಪಣೆ ಮಾಡುವ ಭಕ್ತರು ಸಮಿತಿ ಮುಖ್ಯಸ್ಥ ಎಚ್.ಎಸ್.ವೆಂಕಟೇಶ್ ಹಾಗೂ ಎಚ್.ಕೆ.ಯೋಗೇಶ್(9972653122) ಅವರನ್ನು ಸಂಪರ್ಕಿಸಬಹುದು ಎಂದು ಸಮಿತಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net