

ಹುನಗುಂದ: ಸಂಪತ್ತಿನ ಸಮಾನ ಹಂಚಿಕೆ ಆದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕಿನ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ನಡೆದ ವಕೀಲರ ವೆಲ್‌ಫೇರ್ ಫಂಡ್ ಸ್ಟಾಂಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ನೆರೆಹೊರೆ ಹಾಗೂ ಕೆಳಮಟ್ಟದಲ್ಲಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ನಮ್ಮ ಬದುಕು ಸಾರ್ಥಕ ಆಗುತ್ತದೆ ಎಂದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಟ್ಟಲಕೋಡ ಮಾತನಾಡಿ, ಜಿಲ್ಲೆಯಲ್ಲಿ ಹುನಗುಂದದಲ್ಲಿ ಪ್ರಥಮ ಬಾರಿಗೆ ವೆಲ್ ೇರ್ ಂಡ್ ಆರಂಭಿಸಲಾಗಿದೆ. ವಕೀಲರ ಸಂಘ ಒಂದು ಕುಟುಂಬ ಎಂದು ತಿಳಿಯಿರಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ, ಇಳಕಲ್ ವಕೀಲರ ಸಂಘದ ಅಧ್ಯಕ್ಷ ಬಿ.ಎ. ಅವಟಿ ಪ್ರಾಸ್ತಾವಿಕ ಮಾತನಾಡಿದರು.
ವಕೀಲರದಾದ ವಿ.ಆರ್. ಜನಾದ್ರಿ, ಎಂ.ಎಚ್. ಮಳ್ಳಿ, ಎಂ.ಬಿ. ದೇಶಪಾಂಡೆ, ಎನ್.ಜೆ. ರಾಮವಾಡಗಿ, ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ, ಬಸವರಾಜ ನೇಸರಗಿ, ಗದಗ ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ. ಹದ್ಲಿ, ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗೌಡರ, ವಿ.ಬಿ. ಮ್ಮೂರಮಠ ಹಾಗೂ ಹುನಗುಂದ ಮತ್ತು ಇಳಕಲ್ಲ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.