

ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ಚಾರಿಟಬಲ್ ಟ್ರಸ್ಟ್, ಅಂಬಾಜಿ ಚಾರಿಟಬಲ್ ಟ್ರಸ್ಟ್ ಮತ್ತು ಎಚ್.ಕೆ. ಸುಮಂಗಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಭವಾನಿ ನಗರದ ರೋಟರಿ ಭವನದಲ್ಲಿ 2023-24ನೇ ಸಾಲಿನಲ್ಲಿ ಹತ್ತನೇ ತರಗತಿ ಪಾಸಾದ ಬಡ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಶಿಷ್ಯವೇತನ ನೀಡಲಾಯಿತು.
ಡಿಡಿಪಿಐ ಎಸ್.ಎಸ್. ಕೆಳದಿಮಠ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಮಾತನಾಡಿ, ರೋಟರಿ ಸಂಸ್ಥೆ ನೀಡಿರುವ ಹಣವನ್ನು ನಿಮ್ಮ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಬೇಕು. ಗುರಿ ಮುಟ್ಟುವವರೆಗೂ ಸಾಧನೆ ನಿರಂತರವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಂಬಾಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಪೋರ‌್ವಾಲ್ ಮಾತನಾಡಿದರು.
ರೋಟರಿ ಕ್ಲಬ್ ಸದಸ್ಯ ಕಾರ್ಯದರ್ಶಿ ಎ.ವಿ. ಸಂಕನೂರ, ಸಾದಿಕ್, ಉಮೇಶ ಗಡಾದ, ಡಾ. ಎಸ್.ಎಸ್.ಹಿರೇಮಠ, ವೀರಣ್ಣ ಸುರಕೊಡ, ಶಿವಪುತ್ರ ಮುಕರ್ತಿಹಾಳ, ಮಂಜುನಾಥ ಹೊಂಬಳ, ಅಬ್ದುಲ್, ಈಶ್ವರ ಗುಳಗಣ್ಣವರ, ರಿಯಾಜ್ ಬಸರಿ ಉಪಸ್ಥಿತರಿದ್ದರು.
ಬಾಪುಗೌಡ ಬಿರಾದಾರ ಸ್ವಾಗತಿಸಿದರು. ಎಚ್.ಕೆ. ಸುಮಂಗಲಾ, ಅರವಿಂದ ಕುಬಸದ ನಿರೂಪಿಸಿದರು.