ಜೀವನದಲ್ಲಿ ಗುರು, ಗುರಿ ಇರಲಿ

h1-r.b.patil college
Published on

ಹುಬ್ಬಳ್ಳಿ: ಆಕ್ಸ್‌ಫರ್ಡ್ ಕಾಲೇಜ್ ಸಹಯೋಗದಲ್ಲಿ ನಗರದ ಕುಸುಗಲ್ ರಸ್ತೆಯ ಡಾ.ಆರ್.ಬಿ. ಪಾಟೀಲ ಮಹೇಶ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್‌ನಲ್ಲಿ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರಿಭಾವಹ (ದಿಕ್ಸೂಚಿ) ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಎಂ.ಎಂ. ನರಗುಂದ ಉದ್ಘಾಟಿಸಿ ಮಾತನಾಡಿ, ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ, ಡಿ.ಸಿ. ಪಾವಟೆ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕುರಿತು ವಿವರಿಸಿದರು.
ಆಕ್ಸ್‌ಫರ್ಡ್ ಕಾಲೇಜ್ ಸಂಸ್ಥಾಪಕ ವಸಂತ ಹೊರಟ್ಟಿ ಮಾತನಾಡಿ, ಜೀವನದಲ್ಲಿ ಗುರು, ಗುರಿ ಇರಬೇಕು. ಗುರಿ ಮುಟ್ಟುವ ತವಕ, ಶ್ರದ್ಧೆ ಇರಬೇಕು ಎಂದರು.
ಎನ್‌ಎಲ್‌ಇ ಸೊಸೈಟಿಯ ಸದಸ್ಯ ಗುರುರಾಜ ಕೌಜಲಗಿ, ಶಿವರಾಮ ಹೆಗಡೆ, ಪ್ರಾಚಾರ್ಯ ರವಿರಾಜ ಎಂ. ಶಿದ್ಲಿಂಗ, ಮಾರ್ಗದರ್ಶಕ ರಾಮಮೋಹನ ಎಚ್.ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net