ಸಮಾಜದಲ್ಲಿ ಸಹೋದರತ್ವ ಭಾವನೆ ಮೂಡಲಿ

raakhi
Published on

ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ವಿಶ್ವ ಚೇತನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಕ್ಷಾ ಬಂಧನ ಆಚರಿಸಲಾಯಿತು.

ಸಂಸ್ಧೆ ಅಧ್ಯಕ್ಷ ಸೋಮು ಹೊಂಗಲ ಮಾತನಾಡಿ, ವಸುದೈವ ಕುಟುಂಬಕಂ ಎಂಬ ಸುಂದರ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು. ಮೇಲು-ಕೀಳುಗಳ ಭಾವ ತೊಲಗಿಸಿ ಎಲ್ಲರ ಮನಸನ್ನು ಒಂದುಗೂಡಿಸಿ ಸಹೋದರತ್ವ ಸಾಮರಸ್ಯದ ಮೂಲಕ ಸಂಘರ್ಷಮುಕ್ತ ಸಮಾಜ ನಮ್ಮದಾಗಬೇಕು. ನೆಲ-ಜಲ, ವಾಯು ಇವೆಲ್ಲವನ್ನು ಒಳಗೊಂಡ ಪ್ರಕೃತಿಮಾತೆಯ ಪರಿಸರ ಸಂರಕ್ಷಣೆ ಮಾಡಿ ಮಾಲಿನ್ಯ ಮುಕ್ತ ಆರೋಗ್ಯಕರ ಪರಿಸರ ನಿರ್ಮಿಸಬೇಕಾಗಿದೆ ಎಂದರು.

ಮುಖ್ಯ ಶಿಕ್ಷಕಿ ರಜನಿ ಶಾನವಾಡ ಮಾತನಾಡಿ, ರಕ್ಷೆ ಕಟ್ಟುವುದರಿಂದ ಕುಟುಂಬ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ ಪ್ರತಿಯೊಂದು ಮಗುವು ಉತ್ತಮ ಸಂಸ್ಕಾರ ಪಡೆಯಬೇಕು ಎಂದರು.

ಮಹಾಲಕ್ಷ್ಮೀ ಗವಿ, ಪ್ರೇಮಾ ಪತ್ತಾರ, ಶ್ರೀದೇವಿ ಹೊಂಗಲ, ರೇಖಾ ಭೂಮಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net