ಫಲಾಪೇಕ್ಷೆ ಅಪೇಕ್ಷಿಸದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿ

HKR SANMAN
Published on

ಹಿರೇಕೆರೂರ: ಕಾರ್ವಿುಕರು ಯಾವುದೇ ಫಲಾಪೇಕ್ಷೆ ಅಪೇಕ್ಷಿಸದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರು ಕೆಲಸ ಮಾಡುವ ಸಂಘ-ಸಂಸ್ಥೆ, ಕಚೇರಿಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಕೆಎಸ್​ಆರ್​ಟಿಸಿ ಡಿಪೋದ ಆವರಣದಲ್ಲಿ ಪಟ್ಟಣದಿಂದ ಹರಿಹರ, ಹರಪನಹಳ್ಳಿ, ಕೊಟ್ಟೂರು ಮಾರ್ಗವಾಗಿ ಉಜ್ಜನಿ ತಲುಪುವ ನೂತನ ಬಸ್ ಸೇವೆ ಮತ್ತು ಕಾರ್ವಿುಕರ ದಿನಾಚರಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಕಾರ್ವಿುಕರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು, ಅವುಗಳನ್ನು ಅರಿತು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಜನಪ್ರತಿನಿಧಿಯಾದವರು ಪ್ರಯಾಣಿಕರ, ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಬಹುದಿನದ ಬೇಡಿಕೆಯಾದ ಹರಿಹರ, ಹರಪನಹಳ್ಳಿ, ಕೊಟ್ಟೂರು ಮಾರ್ಗವಾಗಿ ಉಜ್ಜನಿ ತಲುಪುವ ನೂತನ ಬಸ್ ಸೇವೆ ಆರಂಭಿಸಲಾಗಿದೆ ಎಂದರು.

ಇದೆ ವೇಳೆ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುವ ಕಾರ್ವಿುಕರನ್ನು ಶಾಸಕ ಯು.ಬಿ. ಬಣಕಾರ ಸನ್ಮಾನಿಸಿದರು.

ಪಪಂ ಅಧ್ಯಕ್ಷೆ ಸುಧಾ ಚಿಂದಿ, ಸದಸ್ಯರಾದ ಮಹೇಂದ್ರ ಬಡಳ್ಳಿ, ಕವಿತಾ ಹಾರ್ನಳ್ಳಿ, ಕಂಠಾಧರ ಅಂಗಡಿ, ಅಲ್ತಾಫಖಾನ್ ಪಠಾಣ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದುರ್ಗಪ್ಪ ನೀರಲಗಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಶಶಿ ಬೋಸ್ಲೆ, ಶಂಭು ಹಂಸಭಾವಿ, ಡಿಪೋ ವ್ಯವಸ್ಥಾಪಕ ಮಂಜುನಾಥ ಹಡಪದ, ಅಧಿಕಾರಿ ಗಣೇಶ ಊರಣಕರ, ರಾಮು ಚಿಗಮೊರಬದ, ಎಚ್.ವೈ. ಹೊರಕೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net