

ಅಥಣಿ ಗ್ರಾಮೀಣ: ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾಜರು ಹೇಳಿದರು.
ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಶ್ರೀ ಕರಿಲಕ್ಕವ್ವ ದೇವಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಕ್ಕವ್ವದೇವಿ ಮೂರ್ತಿ ಪ್ರತಿಷ್ಠಾಪಣೆ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಗ್ರಾಮಸ್ಥರು ಒಗ್ಗಟ್ಟಿನಿಂದ ಕರಿಲಕ್ಕವ್ವ ದೇವಿ ಮೂರ್ತಿ ಪ್ರತಿಷ್ಠಾಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಬೆಳಗ್ಗೆ ಕರಿಲಕ್ಕವ್ವದೇವಿ ಮೂರ್ತಿಯನ್ನು ಕುಂಭಾರತಿಯೊಂದಿಗೆ ಗ್ರಾಮದ ಎಲ್ಲ ಬಡಾವಣೆಯಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.
ಸಂಕದ ಮಹೇಶ ದೇವರು, ಹಲ್ಯಾಳದ ಅಭಿನವ ಗುರುಸಿದ್ಧೇಶ್ವರ ಸ್ವಾಮೀಜಿ, ಪಿಕೆಪಿಎಸ್ ಅಧ್ಯಕ್ಷ ಬಾಬು ಗಲಗಲಿ, ಅಣ್ಣಪ್ಪ ಗೋಶಿರವಾಡ, ಮಲ್ಲಪ್ಪ ಬುದ್ನಿ, ಸುರೇಶ ಗಲಗಲಿ, ಸದಾಶಿವ ಗೋಶಿರವಾಡ, ಬಸಪ್ಪ ಜಂಬಗಿ, ಶ್ರೀಪತಿ ಭೋಸಲೆ, ಮಹಾದೇವಿ ಗೋಶಿರವಾಡ, ಶಾಂತಾ ಗಲಗಲಿ, ಸವಿತಾ ಕೋಳಿ ಇತರರಿದ್ದರು.