ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ

11ATHANIGRAMIN1
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗದೇ ಕ್ರೀಡೆ, ವ್ಯಾಯಾಮ, ಯೋಗ, ಧ್ಯಾನ ಹಾಗೂ ಜಿಮ್ನಾಸ್ಟಿಕ್ಸ್‌ಗಳಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದು ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ ಕರೆ ನೀಡಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಖೋಖೋ, 3 ಸಾವಿರ ಮೀ. ಓಟ ಹಾಗೂ ಗುಡ್ಡುಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಧಿಸಬೇಕೆಂಬ ಛಲ ಹೊಂದಿರುವವನಿಗೆ ಎಷ್ಟೇ ಅಡೆತಡೆಗಳಿದ್ದರೂ ಆತನಿಗೆ ಕೇವಲ ಗುರಿಯೊಂದೇ ಕಾಣುತ್ತದೆ. ಕ್ರೀಡಾ ಪಟುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೇ ದೇಶವನ್ನು ಪ್ರತಿನಿಧಿಸುವಂತಾಗಲಿ ಎಂದರು.

ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಕ್ರೀಡೆ, ಸಂಗೀತಗಳಂತಹ ಕ್ಷೇತ್ರಗಳಲ್ಲಿ ವಿುಲ ಅವಕಾಶಗಳಿವೆ ಎಂದು ಅರಿತರೂ ಕೂಡ ಪಾಲಕರು ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಆಸೆ ತುಂಬಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಪ್ರಾಚಾರ್ಯ ಸುರೇಶ ನಾಯಿಕ, ಗುರುಮೂರ್ತಯ್ಯ ಕಾಡದೇವರಮಠ, ವಿಶಾಲ ದೇಸಾಯಿ, ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ, ಸುಭಾಷ ಸೋನಕರ, ಲಕ್ಷ್ಮಣ ಮಗರ, ಗುಳಪ್ಪ ಪೂಜಾರಿ, ಗಣಪತಿ ಕಾಂಬಳೆ, ರಾಜು ಗಡಕರ, ಮಹೇಶ ಕಾಡದೇವರಮಠ, ಭರತೇಶ ಗುರುಸ್ವಾಮಿ, ದಿ.ಎಸ್.ಹುಲ್ಲೇಣ್ಣವರ, ಪ್ರಶಾಂತ ಬಡಿಗೇರ, ಚಿದಾನಂದ ಮಗದುಮ್ಮ, ಗೌರವ್ವ ಮೂಲಿಮನಿ, ಮೀನಾಕ್ಷಿ ನಂದೇಶ್ವರ, ಟಿ.ಆರ್.ಆಲಕನೂರ ಇತರರಿದ್ದರು. ರತ್ನಪ್ಪ ಅಂಬಾಜಿ ಸ್ವಾಗತಿಸಿದರು. ಪಾಂಡು ಚವ್ಹಾಣ ನಿರೂಪಿಸಿದರು. ಸುಧಾರಾಣಿ ನೇಮಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net