ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ

Student GOVT
ಹೊಸೂರು ಪ್ರೌಢಶಾಲೆಯ ವಿದ್ಯಾರ್ಥಿ ಸರ್ಕಾರವನ್ನು ಕೆಡಿಪಿ ಸದಸ್ಯ ಕೆರಾಡಿ ಪ್ರಸನ್ನಕುಮಾರ್ ಶೆಟ್ಟಿ ಉದ್ಘಾಟಿಸಿದರು.
Published on

ಬೈಂದೂರು: ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳು, ಚುನಾವಣೆಗಳು, ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಉತ್ತುಂಗಕ್ಕೇರಿಸಲು ಸಹಕಾರಿಯಾಗುತ್ತವೆ. ಈ ನೆಲೆಯಲ್ಲಿ ಶಾಲೆಯಲ್ಲಿ ನಡೆಯುವ ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ವಕೀಲ, ಸಮಾಜ ಸೇವಕ, ಕೆಡಿಪಿ ಸದಸ್ಯ ಕೆರಾಡಿ ಪ್ರಸನ್ನಕುಮಾರ್ ಶೆಟ್ಟಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹೊಸೂರು ಪ್ರೌಢಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರವನ್ನು ಉದ್ಘಾಟಿಸಿ ಮತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಾಧನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯಶಿಕ್ಷಕ ಎ.ಶಿವರಾಮ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಸರ್ಕಾರದ ಸಭಾಪತಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸರ್ಕಾರದ ನೂತನ ಸಭಾಪತಿಯಾಗಿ ಅಶ್ವಿತ್ ಶೆಟ್ಟಿ, ಮುಖ್ಯಮಂತ್ರಿಯಾಗಿ ನೂತನ್ ಶೆಟ್ಟಿ, ಉಪ ಮುಖ್ಯಮಂತ್ರಿಯಾಗಿ ಶ್ರೇಯಸ್ ಕುಮಾರ್ ಶೆಟ್ಟಿ ಹಾಗೂ ಸಂಪುಟದ ಎಲ್ಲ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಸಹಶಿಕ್ಷಕ ಹೆರಿಯಣ್ಣ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಶೆಟ್ಟಿ ವಿದ್ಯಾರ್ಥಿ ಸರ್ಕಾರದ ರಚನೆಯ ಬಗ್ಗೆ ವಿವರಿಸಿದರು. ಶಿಕ್ಷಕ ಉದಯ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net