

ಮೂಡಲಗಿ: ಪುರಸಭೆ ಅವರಣದಲ್ಲಿ ಪೌರ ಕಾರ್ಮಿಕರು ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅರ್ನಿದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹೊರಗುತ್ತಿಗೆ ಪದ್ಧತಿ ನಿಲ್ಲಿಸಿ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ನೀರು ಸರಬರಾಜುದಾರರು ಹಾಗೂ ವಾಹನ ಚಾಲಕರು ಜೀವನ ಭದ್ರತೆಯಿಲ್ಲದೆ ಸಾಗುತ್ತಿದ್ದು, ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬಿಬಿಎಂಪಿ ಪೌರಕಾರ್ಮಿಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇವೆ ಕಾಯಂಗೊಳಿಸಿದ್ದು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವವರನ್ನು ರ್ನಿಲಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಸ್ಥಳಿಯ ರೆತ ಸಂಟನೆಯ ಪದಾಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿ ಪೌರ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು. ಕರ್ನಾಟಕ ರೆತರ ಹಿತರಣಾ ವೇದಿಕೆಯ ಜಿಲ್ಲಾಧ್ಯ ಸುರೇಶ ನಾಯ್ಕ, ತಾಲೂಕಾಧ್ಯ ಭೀಮಶಿ ರೋಡನ್ನವರ, ಪರೀಶ ಉಪ್ಪಿನ, ಪೌರ ನೌಕರರ ಸಂದ ತಾಲೂಕಾಧ್ಯ ಯಶವಂತ ಶಿದ್ದಿಂಗಪ್ಪಗೋಳ ಹಾಗೂ ಅನೇಕ ಪೌರ ಕಾರ್ಮಿಕರು ಇದ್ದರು.