

ಮೈಸೂರು: ಎಲ್ಲ ಕಡೆಯಲ್ಲೂ ರಂಗ ಶಿಕ್ಷಣ ಮತ್ತು ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
ಮೈಸೂರು ವಿವಿ ಲಲಿತ ಕಲಾ ಕಾಲೇಜು, ಗುಬ್ಬಿ ವೀರಣ್ಣ ಪೀಠ, ರಂಗಾಯಣ ಹಾಗೂ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿರುವ ರಂಗಭೂಮಿ ಹಾಗೂ ರಂಗಭೂಮಿಯ ಪೂರಕ ಕಲೆಗಳ ಉಪನ್ಯಾಸ ಮಾಲಿಕೆ ರಂಗಸಂಯುಕ್ತ ಕಾರ್ಯಕ್ರಮಕ್ಕೆ ಶುಕ್ರವಾರ ಲಲಿತ ಕಲಾ ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುಸ್ವಾಮಿ, ಲಲಿತ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಅನಿಟ ವಿಮ್ಲ ಬ್ರಾೃಗ್ಸ್, ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಯೋಗಾನಂದ ಇತರರಿದ್ದರು. ರಂಗಭೂಮಿ ಹಾಗೂ ರಂಗಭೂಮಿಯ ಪೂರಕ ಕಲೆಗಳ ಉಪನ್ಯಾಸ ಮಾಲಿಕೆ ರಂಗಸಂಯುಕ್ತ ಫೆ.9 ರವರೆಗೆ ನಡೆಯಲಿದೆ.