

ವಿಜಯವಾಣಿ ಸುದ್ದಿಜಾಲ ಧಾರವಾಡ
ತಮ್ಮ ಸಂಸತಿ ಪ್ರತಿಕವಾಗಿರುವ ರಂಗಭೂಮಿಯನ್ನು ನಾವು ಇಂದು ಕಳೆದುಕೊಂಡಿದ್ದೇವೆ. ರಂಗಭೂಮಿ ಬಗ್ಗೆ ಆಸಕ್ತಿ ಅಭಿರುಚಿ ಇಲ್ಲದೆ ಇರುವವವರು ಅಕಾಡೆಮಿ ಅಧ್ಯಕ್ಷರಾಗುತ್ತಿರುವುದು ದುರಂತದ ಸಂಗತಿ ಎಂದು ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಡಾ. ವೀರಣ್ಣ ರಾಜೂರ ದತ್ತಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ರಾಜಮಾರ್ಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ಹಂತಕ್ಕೆ ಹುಬ್ಬಳ್ಳಿಯಂತಹ ನಗರದಲ್ಲಿ ನಾಟಕ ಪ್ರದರ್ಶನ ಮಾಡುವುದಕ್ಕೆ ರಂಗಮಂದಿರ ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗೆ ನಾಟಕ ಕಂಪನಿಗಳು ಇದ್ದವು. ಇವತ್ತು ಕಲಾವಿದರಿಗೆ ಅವಕಾಶ, ಪ್ರೋತ್ಸಾಹ ಸಿಗದಿರುವುದು ಖೇದದ ಸಂಗತಿ. ಕರ್ನಾಟಕದಲ್ಲಿ ಅನೇಕ ನಾಟಕ ಕಂಪನಿಗಳು ಜನ್ಮತಾಳಿ ತಮ್ಮ ಕಲೆ ಮೂಲಕ ಜನರಿಗೆ ಮನರಂಜನೆ ನೀಡಿವೆ. ಅನೇಕ ಕಲಾವಿದರ ಕುಟುಂಬ ನಿರ್ವಹಣೆಗೆ ಆಶ್ರಯ ತಾಣಗಳಾಗಿದ್ದವು. ರಂಗಭೂಮಿ ಬದುಕ ಬೇಕಿದ್ದರೆ ಸರ್ಕಾರಗಳ ಮೇಲೆ ಒತ್ತಡ ಹೇರಿ ಇದನ್ನೊಂದು ಉದ್ಯಮವನ್ನಾಗಿ ಮಾಡುವ ಅಗತ್ಯವಿದೆ ಎಂದರು.
ವೃತ್ತಿ ರಂಗಭೂಮಿ ಕಲಾವಿದೆ ಪುಷ್ಪಮಾಲಾ ಅಣ್ಣೀಗೇರಿ ರಾಜಮಾರ್ಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಎಚ್.ಎಂ. ಹೂಗಾರ ರಂಗಭೂಮಿ ಮಹತ್ವದ ಬಗ್ಗೆ ನನ್ನಲ್ಲಿ ಜಾಗೃತಿ ಮೂಡಿಸಿದರು. ರಾಜಮಾರ್ಗದಲ್ಲಿ ಬೆಳೆದು ಬಂದ ನಾನು ಡಾ. ವೀರಣ್ಣ ರಾಜೂರ ಅವರ ರಾಜಮಾರ್ಗ ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬೆಂಗೇರಿ, ಬಿ.ಐ. ಈಳಿಗೇರ, ಪರಮೇಶ್ವರ ರಾಮಾ ಮಡಿವಾಳ, ಡಾ. ವೀರಣ್ಣ ರಾಜೂರ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಶಿಧರ ತೋಡಕರ, ಡಾ. ಬಿ.ವಿ. ಶಿರೂರ, ಡಾ. ಶಿವಾನಂದ ಟವಳಿ, ಮಲ್ಲಿಕಾರ್ಜುನ ಹಿರೇಮಠ, ಕೆ.ಎಚ್.ನಾಯಕ, ಎಸ್.ಜಿ. ಪಾಟೀಲ, ಶಾಂತವೀರ ಬೆಟಗೇರಿ, ಬಸವಂತಪ್ಪ ತೋಟದ, ರಾಮಂಚಂದ್ರ ಧೋಂಗಡೆ, ಸುರೇಶ ಹಿರೇಮಠ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಎ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.