

ಕುಂದಗೋಳ: ಸಮಾಜದ ಪ್ರತಿಯೊಂದು ಕುಟುಂಬದಲ್ಲೂ ಶಿಕ್ಷಣವಂತರಾಗುತ್ತಿದ್ದಾರೆ. ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದೇ ರೀತಿ ಕುರಬಗೇರಿಯ ಹಿರಿಯರು, ಯುವಕರು ಸಮಾಜವನ್ನು ಒಗ್ಗೂಡಿಸಬೇಕು ಎಂಬ ಮನೋಭಾವ ಬೆಳೆಸಿಕೊಂಡಿರುವುದು ಸಂತೋಷದ ವಿಚಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.
ತಾಲೂಕಿನ ಬೆಟದೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರಸ್ವಾಮಿ ದೇವರ 3ನೇ ವರ್ಷದ ಜಾತ್ರಾ ಮಹೋತ್ಸವ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನೋಡಿದರೆ ಸಂತೋಷವಾಗುತ್ತದೆ. ಈ ಹಿಂದೆ ಕೆಂಡಮಠದ ಸ್ವಾಮೀಜಿಗಳು ಹೇಳುತ್ತಿದ್ದರು ಈ ದೇವಸ್ಥಾನ ನಿಮ್ಮ ಅಣ್ಣ ಸಿ.ಎಸ್. ಶಿವಳ್ಳಿ ಅವರು ಕಟ್ಟಿಸಿದ್ದಾರೆ. ನೀವು ನಮ್ಮ ಸಮುದಾಯ ಭವನ ಕಟ್ಟಿಸಿಕೊಡಿ. ಸಮಾಜದ ಕಾರ್ಯಕ್ರಮಗಳು, ಮದುವೆ, ಸಭೆ, ಸಮಾರಂಭಗಳು ಮಾಡಲು ಸಮುದಾಯ ಭವನದ ಅವಶ್ಯಕತೆ ಇದೆ ಎಂದು ಪೂಜ್ಯರು ಹೇಳಿದ್ದರು. ದೇವಸ್ಥಾನ ಪಕ್ಕದಲ್ಲಿ ಸಮುದಾಯ ಭವನ ಕಟ್ಟಲು ಜಾಗವಿದ್ದರೆ ಅದನ್ನು ಹಿಡಿಯಲು ನಾನು ನಮ್ಮ ಅಣ್ಣನ ಹೆಸರಿನಲ್ಲಿ, ನಿಮ್ಮ ನಾಯಕರು ದಿ. ಸಿ.ಎಸ್. ಶಿವಳ್ಳಿ ಅವರ ಹೆಸರಿನ ಮೇಲೆ 2,50,000 ರೂ. ಕೊಡುತ್ತೇನೆ. ತಾವು ಜಾಗ ಖರೀದಿ ಮಾಡಿಹಾಗೂ ಸರ್ಕಾರ ನಮ್ಮದೇ ಇರುವುದರಿಂದ ಭವನ ನಿರ್ಮಾಣ ಮಾಡಲು ಅನುದಾನ ತರುವ ಪ್ರಯತ್ನ ಮಾಡುವೆ. 4ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪೂಜ್ಯರ ಸಮ್ಮುಖದಲ್ಲಿಯೇ ಸಮುದಾಯ ಭವನ ಉದ್ಘಾಟಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್, ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ಕೊಡಬೇಕು. ಆಗಮಾತ್ರ ಸಮಾಜ, ದೇಶ ಸುಧಾರಣೆ ಆಗುತ್ತದೆ ಎಂದರು. ಗೌಡಪ್ಪಗೌಡ ಪಾಟೀಲ ಮಾತನಾಡಿ, ಶ್ರೀ ಬೀರಲಿಂಗೇಶ್ವರ ದೇವರು ಒಳಿತು ಮಾಡಲಿ ಎಂದರು. ಶ್ರೀ ಸಿದ್ಧಯ್ಯ ಮಹಾಸ್ವಾಮೀಜಿ ಕೆಂಡಲಮಠ ಆಶೀರ್ವಚನ ನೀಡಿದರು. ಭಕ್ತರು 60 ಕ್ವಿಂಟಾಲ್ ಭಂಡಾರ ಎರಚಿದ್ದು ವಿಶೇಷವಾಗಿತ್ತು. ಡಾ. ಮುಂಜುನಾಥ ಬಾರಕೇರ ನಿರೂಪಿಸಿದರು. ರಮೆಶ ಚಲವಾದಿ ಸ್ವಾಗತಿಸಿದರು. ರಾಮಪ್ಪ ತಿರ್ಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜು ದೊಡ್ಡ ಶಂಕರ, ಉಪಾಧ್ಯಕ್ಷ ಮಮತಾಜ ಮ. ಹಾರೋಬಿಡಿ, ಸದಸ್ಯರಾದ ಶಾಂತವ್ವ ಯ ತಿರ್ಲಕೋಪ್ಪ, ತಮ್ಮನಗೌಡ ಪಾಟೀಲ, ಮಂಜವ್ವ ತಿರ್ಲಕೊಪ್ಪ, ಶೇಖವ್ವ ಮಾದರ, ಶಿವಪ್ಪ ಕೋಪ್ಪದ, ಮಲ್ಲವ್ವ ಪಿಡ್ಡಕ್ಕನವರ, ರುದ್ರವ್ವ ಹಡಪದ, ಆಫ್ರಿನ್ ಹೊಸಮನಿ, ಈರಪ್ಪ ಮತ್ತಿಗಟ್ಟಿ, ಭಾಗವಹಿದ್ದರು.