ಯುವಕರು ದುಶ್ಚಟಗಳಿಂದ ದೂರವಿರಲಿ

Let the youth stay away from mischief
ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ 2023-24 ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟಿಸಿದರು. ಪ್ರೊ. ಪಿ.ಬಿ. ಬಡಿಗೇರ, ಪ್ರಾಚಾರ್ಯ ಪ್ರೊ. ಎ.ಜೆ. ಮುದ್ದೇಬಿಹಾಳ, ಸಂಸ್ಥೆ ಅಧ್ಯಕ್ಷ ಸಂತೋಷ ಜಾಡರ ಇದ್ದರು.
Published on

ಬೀಳಗಿ: ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂಥ ಚಟಗಳಿಂದ ದೂರು ಉಳಿದರೆ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುವುದು ಎಂದು ಎನ್.ಎನ್. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಬಿ. ಬಡಿಗೇರ ಹೇಳಿದರು.

ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಪಪೂ ಕಾಲೇಜಿನ 2023-24ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಪ್ರೊ. ಎ.ಜೆ. ಮುದ್ದೇಬಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಎನ್ನುವುದು ಬಹಳ ಮುಖ್ಯ ಘಟ್ಟ. ಈ ವಯಸ್ಸಿನಲ್ಲಿ ಬಹಳಷ್ಟು ಜಾಗೃತಿಯಿಂದಿದ್ದರೆ ಮುಂದಿನ ತಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಸೊನ್ನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಈ.ಎಸ್. ವಜ್ರಮಟ್ಟಿ, ಸಂಸ್ಥೆ ಅಧ್ಯಕ್ಷ ಸಂತೋಷ ಎಸ್. ಜಾಡರ, ಪ್ರೊ. ಎಸ್. ಎಸ್. ಆಗೋಜಿ, ಉಪನ್ಯಾಸಕರಾದ ಪ್ರೊ. ಎಚ್. ಎಂ. ಯಡಹಳ್ಳಿ, ಪ್ರೊ. ಪಿ. ಸಿ. ಕೋಲಕಾರ, ಪ್ರೊ. ಎಸ್. ಎಂ. ಗೋಕಾವಿ, ಪ್ರೊ. ಆರ್. ಎ. ಬೂದಿಹಾಳ, ಪ್ರೊ. ಈ. ಬಿ. ಮಹೇಂದ್ರಕರ, ಪ್ರೊ. ಆರ್. ಈ. ಪೂಜಾರಿ, ಪ್ರೊ. ಎಸ್. ಎಸ್. ಶಿಕ್ಕೇರಿ, ಪ್ರೊ. ಕೆ. ಎಂ. ಕುಲಕರ್ಣಿ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net