ಯುವಕರು ದುಶ್ಚಟದಿಂದ ದೂರವಿರಲಿ

tdl
ತೇರದಾಳ ತಾಲೂಕಿನ ಗೋಲಬಾಂವಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಭು ಪರಂ ಜ್ಯೋತಿ ಪಾದಯಾತ್ರೆ ನಿಮಿತ್ಯ ದುಶ್ಚಟ ಜೋಳಿಗೆ ಪ್ರಯುಕ್ತ ಡಾ.ಮಹಾಂತಪ್ರಭು ಆಶಿರ್ವಚನ ನೀಡಿದರು. ಚಿಮ್ಮಡದ ಪ್ರಭು ಶ್ರೀ, ಗಂಗಾಧರದೇವರು, ತೇಲಂಗಾಣದ ವೀರೂಪಾಕ್ಷದೇವರು ಇದ್ದರು.
Published on

ತೇರದಾಳ: ಶೂನ್ಯಸಿಂಹನಾಧೀಶ್ವರ ಅಲ್ಲಮಪ್ರಭುದೇವರ ಪ್ರಭು ಪರಂ ಜ್ಯೋತಿ ಪಾದಯಾತ್ರೆ ತೇರದಾಳದಿಂದ ಸುತ್ತಮುತ್ತಲಿನ ಗ್ರಾಮಗಳತ್ತ ಸಂಚರಿಸಿತು.

ಬುಧವಾರದಂದು ಪಟ್ಟಣದಿಂದ ಕಾಲತಿಪ್ಪಿ, ಗೋಲಬಾಂವಿ ಗ್ರಾಮಗಳಿಗೆ ದರ್ಶನ ನೀಡಿ, ಶರಣ ಸಂಸ್ಕೃತಿ ಹಾಗೂ ದುಶ್ಚಟ ಜೋಳಿಗೆ ಪ್ರಚೂರಪಡಿಸಿತು. ಪ್ರಭು ಜ್ಯೋತಿ ಯಾತ್ರೆಗೆ ಗ್ರಾಮದ ಮಹಿಳಾ ಸದ್ಭಕ್ತರು ದಾರಿಯುದ್ದಕ್ಕೂ ಸ್ವಚ್ಛತೆಯ ಜೊತೆಗೆ ರಂಗೋಲಿ ಹಾಕಿ, ಹೂವಿನ ಹಾಸಿಗೆ ಹಾಸಿ, ಹೂಮಳೆಗರೆದು ವಾದ್ಯಮೇಳಗಳೊಂದಿಗೆ ಸ್ವಾಗತಿಸಿಕೊಂಡರು.

ಶರಣ ಉತ್ಸವದಂತೆ ಗ್ರಾಮೀಣ ಭಾಗಗಳಲ್ಲಿ ನಡೆದ ಶರಣರ ಚಿಂತನೆಯು ಸದ್ಭಕ್ತರಲ್ಲಿ ಸಂಚಲನ ಮೂಡಿಸಿತು.

ಕಾಲತಿಪ್ಪಿ ಗ್ರಾಮದ ಹನುಮಾನದೇವಸ್ಥಾನ ಹಾಗೂ ಗೋಲಭಾಂವಿ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಶೇಗುಣಸಿ ಡಾ. ಮಹಾಂತಪ್ರಭು ಶ್ರೀಗಳು ಆಶೀರ್ವಚನ ನೀಡಿ, ಹಿಂದು ಧಾರ್ಮಿಕ ಸಂಪ್ರದಾಯ ಆಚರಿಸುವ ಮೂಲಕ ಮನುಷ್ಯನ ಪಾಪಗಳು ಪರಿಹಾರವಾಗಿ ಸತ್ಕರ್ಮ ನಿರತ ಶರಣನಾಗಲು ಸಾಧ್ಯ. ಕಾರಣ ನಿಮ್ಮೆಲ್ಲ ದುಶ್ಚಟಗಳನ್ನು ಅಜ್ಜನ ಜೋಳಿಗೆಗೆ ಹಾಕಿ ಹೊಸ ಮನುಷ್ಯರಾಗಿ ಬಾಳಿ. ಈ ಮೂಲಕ ಅಲ್ಲಮಪ್ರಭು ಅಜ್ಜನವರ ಕೃಪಾಶೀರ್ವಾದವು ನಿಮ್ಮ ಮೇಲೆ ಸದಾ ಇರುತ್ತದೆ ಎಂದರು.

ಇಷ್ಟೊಂದು ಪ್ರೀತಿ, ಆತ್ಮೀಯತೆಯಿಂದ ಪ್ರಭುಜ್ಯೋತಿಗೆ ಆವ್ಹಾನಿಸಿದ ನೀವೇ ಧನ್ಯರು. ಭಕ್ತಿಯ ಸಂಚಲನದ ಮೂಲಕ ಇಡಿ ತಿಂಗಳು ಪ್ರಭುವಿನ ಧ್ಯಾನದಲ್ಲಿ ಎಲ್ಲರೂ ನಿರತರಾಗಿ ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಯುವಕರು ಸದಢ ಭಾರತ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚಿಮ್ಮಡದ ಪ್ರಭುಸ್ವಾಮೀಜಿ, ತೇರದಾಳ ಹಿರೇಮಠದ ಗಂಗಾಧರದೇವರು, ತೇಲಂಗಾಣದ ವೀರೂಪಾಕ್ಷದೇವರು ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಈರಣ್ಣ ಲಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net