ಯುವಜನತೆ ದುಶ್ಚಟಗಳಿಂದ ದೂರವಿರಲಿ

Let the youth stay away from evil
ಗೊಳಸಂಗಿ ಸಮೀಪದ ಮುತ್ತಗಿ ಗ್ರಾಮದಲ್ಲಿ ಪುರಾಣ ಮಂಗಲೋತ್ಸವ ನಂತರ ಬಾಲಶಿವಯೋಗಿ ಆನಂದ ದೇವರ ಸಮ್ಮುಖದಲ್ಲಿ ಮಹಿಳೆಯರು ಮೇಣದ ಬತ್ತಿ ಬೆಳಗಿಸಿದರು.
Published on

ಗೊಳಸಂಗಿ: ನಿಮ್ಮನ್ನು ಕೀಳಾಗಿ ಕಂಡು ಅವಮಾನಿಸಿದ್ದನ್ನು ಸವಾಲಾಗಿ ಸ್ವೀಕರಿಸಿ, ಬೆಳೆದುನಿಂತು ಮುಂದೊಂದು ದಿನ ಅವರೇ ನಿಮ್ಮನ್ನು ಸನ್ಮಾನಿಸುವಂತಾಗಬೇಕು ಎಂದು ಹುಣಶಾಳ&ಪಿಬಿ ಹಿರೇಮಠದ ಬಾಲ ಶಿವಯೋಗಿ ಆನಂದ ಗುರೂಜಿ ಯುವಕರಿಗೆ ಸಲಹೆ ನೀಡಿದರು.

ಸಮೀಪದ ಮುತ್ತಗಿ ಗ್ರಾಮದಲ್ಲಿ ಬಸವದಳ ಸೇವಾ ಸಮಿತಿ ನೇತೃತ್ವದಲ್ಲಿ ಕಳೆದ ಆ.26 ರಿಂದ ಆರಂಭಿಸಲಾಗಿದ್ದ ಗುಡ್ಡಾಪುರದ ವರದಾನಿ ದಾನಮ್ಮದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾನವ ಜನ್ಮ ದೊಡ್ಡದು. ದುಶ್ಚಟಗಳ ದಾಸರಾಗದೆ ಬದುಕು ಕಟ್ಟಿಕೊಳ್ಳಬೇಕು. ದುರಾಸೆಯ ದಾಸರಾಗಿ ಮಾನವೀಯತೆಯನ್ನೇ ಮರೆತು ನೀವೆಷ್ಟೇ ಗಳಿಸಿದರೂ ಕೊನೆಯಲ್ಲಿ ಸಿಗುವುದು ಕೇವಲ 3 ಅಡಿ 6 ಅಡಿ ಜಾಗ ಮಾತ್ರ ಎಂಬ ಕಹಿಸತ್ಯ ಮರೆಯಬಾರದು ಎಂದರು.

ಪುರಾಣ ಮಂಗಲದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರು ಬಾಲ ಶಿವಯೋಗಿ ಆನಂದ ಗುರೂಜಿ ಸಮ್ಮುಖದಲ್ಲಿ ಮೇಣದ ಬತ್ತಿ ಬೆಳಗಿಸಿದರು.

ಇದಕ್ಕೂ ಮುನ್ನ ಗ್ರಾಮದ ಹುಚ್ಚಪ್ಪಯ್ಯನ ಗದ್ದುಗೆಯಿಂದ ಸಿದ್ಧರಾಮೇಶ್ವರ ದೇವಸ್ಥಾನದವರೆಗೆ ಗುಡ್ಡಾಪುರ ದಾನಮ್ಮದೇವಿಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮೆರವಣಿಗೆಯುದ್ದಕ್ಕೂ ಮುತೆದೆಯರ ಕಳಸದಾರತಿ, ಕುಂಭಮೇಳ, ಡೊಳ್ಳುವಾದನ ಮೆರಗು ತಂದಿತು. ಒಂಬತ್ತು ದಿನ ಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಂಬಳನೂರ ಹಿರೇಮಠದ ಸಂಗಮನಾಥ ಶ್ರೀಗಳು ವರದಾನಿ ಗುಡ್ಡಾಪುರ ನಮ್ಮದೇವಿಯ ಪ್ರವಚನ ಹೇಳಿದರು. ದೇವರಾಜ ಯರಕಿಹಾಳ, ಸುರೇಶ ಹೂಗಾರ ಸಂಗೀತ ಸೇವೆ ಸಲ್ಲಿಸಿದರು.ಗ್ರಾಪಂ ಅಧ್ಯೆ ನೀಲಾ ಪಾಟೀಲ,

ಪ್ರಮುಖರಾದ ಶಿವಶಂಕರಗೌಡ ಬಿರಾದಾರ, ಪ್ರೇಮಕುಮಾರ ಮ್ಯಾಗೇರಿ, ಮಲ್ಲನಗೌಡ ರಾಯಗೊಂಡ, ಹನುಮಗೌಡ ಬಿರಾದಾರ, ಸುರೇಶಗೌಡ ರಾಯಗೊಂಡ, ಸಂಗಪ್ಪಗೌಡ ನಾಯ್ಕರ, ಗಿರಿಧರ ಬಿರಾದಾರ, ಮಲ್ಲು ಹೊಟ್ಟಿ, ಶಿವಪ್ಪ ದೇವಣಗಾವಿ, ಸೋಮಲಿಂಗ ಹೊಸಮನಿ, ಬಿ.ಎನ್​.ನಾಯ್ಕರ, ಮಲ್ಲಿಕಾರ್ಜುನ ಬಿರಾದಾರ, ಪ್ರಮೋದ ಕುಲಕರ್ಣಿ, ಅಮರೇಶಗೌಡ ಪಾಟೀಲ, ಬಸನಗೌಡ ಬಿರಾದಾರ, ದೇವೇಗೌಡ ಬಿರಾದಾರ, ಮಹಾಂತೇಶ ಮುಕಾರ್ತಿಹಾಳ, ಶ್ರೀಶೈಲಗೌಡ ಬಿರಾದಾರ, ಚನ್ನಪ್ಪ ವಾಲಿಕಾರ, ಶಿವಪ್ಪ ತೊಣಶಾಳ, ಮಹಾದೇವ ದಳವಾಯಿ, ಬಸವದಳ ಮಾಲಾಧಾರಿಗಳು, ಮಹಿಳೆಯರು, ಗ್ರಾಮಸ್ಥರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net