ಯುವಜನರು ದೇಶದ ಸಂಸ್ಕೃತಿ ಕಾಪಾಡಲಿ

26ATHANIGRAMIN1
Published on

ಅಥಣಿ ಗ್ರಾಮೀಣ: ಸರಳ ಹಾಗೂ ಶುದ್ಧ ಭಕ್ತಿ ಬಯಸುವ ಶಿವನನ್ನು ಧ್ಯಾನಿಸಿ ಪೂಜೆ ಮಾಡುವ ಹಬ್ಬವೇ ಮಹಾಶಿವರಾತ್ರಿ ಎಂದು ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯರು ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ 64ನೇ ಮಹಾಶಿವರಾತ್ರಿ ಹಾಗೂ ಕಾಡಸಿದ್ಧೇಶ್ವರಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ದೇಸಿ ಸಂಸ್ಕೃತಿ ನಾಶವಾಗುತ್ತಿದೆ. ಹೀಗಾಗಿ ಭಾರತೀಯ ಸಂಸ್ಕೃತಿ,

ಆಚಾರ ಮತ್ತು ವಿಚಾರಗಳನ್ನು ಯುವಕರಲ್ಲಿ ಬಿತ್ತುವ ಕಾರ್ಯ ಮಾಡುವುದು ಅವಶ್ಯ ಎಂದರು.

ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಮಾತನಾಡಿ, ಶಾಂತಿ, ನೆಮ್ಮದಿ ಪಡೆಯಲು ಆಧ್ಯಾತ್ಮದಲ್ಲಿ ಪಾಲ್ಗೊಳ್ಳಬೇಕು ಎಂದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು.

ಕಾಡಸಿದ್ಧೇಶ್ವರ ಗದ್ದುಗೆಗೆ ಮಹಾಭಿಷೇಕ, ವಿಶೇಷ ಅಲಂಕಾರ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಮುಖಂಡ ದೇವರಾಜ ದೇಸಾಯಿ, ಗುರುಮೂರ್ತಯ್ಯ ಕಾಡದೇವರಮಠ, ಜಿಪಂ ಮಾಜಿ ಸದಸ್ಯ ಪ್ರಲ್ಹಾದ್ ಪೂಜಾರಿ, ಸುಭಾಷ ಸೋನಕರ, ರಾಜು ಪಾಟೀಲ, ಅರುಣ ಮುದಕಣ್ಣವರ, ಹನುಮಂತ ಬಡಿಗೇರ, ಚನ್ನಪ್ಪ ನೇಮಗೌಡ, ಸತೀಶ ಸೋನಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net