ಸಮಾಜದ ಯುವಕರು ಸ್ವ ಉದ್ಯೋಗ ಕೈಗೊಳ್ಳಲಿ

samavesha
ಮುಧೋಳದಲ್ಲಿ ಹಮ್ಮಿಕೊಂಡಿದ್ದ ಚೆನ್ನದಾಸರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ ಗಂಗಾಧರಪ್ಪ, ಚೆನ್ನದಾಸರ ಜಿಲ್ಲಾಧ್ಯಕ್ಷ ಎಸ್.ಕೆ. ದಾಸರ, ಪಿ.ಸಿ. ಗದ್ದಿಗೌಡರ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಕೆಎಂಎ್ ಅವಳಿ ಜಿಲ್ಲೆ ಅಧ್ಯಕ್ಷ ಸಂಜಯ ತಳೇವಾಡ, ಅರುಣ ಕಾರಜೋಳ ಇದ್ದರು.
Published on

ಮುಧೋಳ: ಭಯ ಭಕ್ತಿಗೆ ಹೆಸರಾಗಿರುವ ಸಮಾಜವೆಂದರೆ ಅದು ಚೆನ್ನದಾಸರ ಸಮಾಜ. ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಮುಂದೆಬರಲಿ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ನಗರದ ಪೊಲೀಸ್ ಭವನ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಚೆನ್ನದಾಸರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದರಲ್ಲದೆ, ಸಮಾಜವನ್ನು ಎಸ್‌ಸಿಗೆ ಸೇರ್ಪಡೆ ಹಾಗೂ ಮುಧೋಳದಲ್ಲಿ ಚೆನ್ನದಾಸರ ಭವನ ಪೂರ್ಣಗೊಳಿಸಲು ಅನುದಾನ ನೀಡಲಾಗುವುದೆಂದು ಭರವಸೆ ನೀಡಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ದಾಸರ ಸಮಾಜ ಚಿಕ್ಕದಾದರೂ ಚೊಕ್ಕ ಸಮಾಜ. ಸಮಾಜದ ಯುವಕರು ಸ್ವ ಉದ್ಯೋಗಕ್ಕೆ ಕೈಗೊಳ್ಳಬೇಕು. ಸಮಾಜದ ಶ್ರೇಯೋಭಿವೃದ್ಧಿಗೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಶಾಸಕ ಸಿದ್ದು ಸವದಿ, ನಿವೃತ್ತ ಡಿಸಿಪಿಐ ಎಂ.ಜಿ. ದಾಸರ ಮಾತನಾಡಿದರು.

ಬಬಲಾದಿ ಮೂಲಮಠದ ಸಿದ್ಧರಾಮಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಹಾಗೂ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ಗಂಗಾಧರಪ್ಪ, ಚೆನ್ನದಾಸರ ಜಿಲ್ಲಾಧ್ಯಕ್ಷ ಎಸ್.ಕೆ. ದಾಸರ, ಪಿ.ಸಿ. ಗದ್ದಿಗೌಡರ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಕೆಎಂಎಫ್ ಅವಳಿ ಜಿಲ್ಲೆ ಅಧ್ಯಕ್ಷ ಸಂಜಯ ತಳೇವಾಡ, ಅರುಣ ಕಾರಜೋಳ, ಗೌವರಾಧ್ಯಕ್ಷ ರಾಮಪ್ಪ ದಾಸರ, ಲಕ್ಷ್ಮೀ ದಾಸರ, ಬಸವರಾಜ ದಾಸರ, ಶ್ರೀಕಾಂತ ದಾಸರ ಡಿವೈಎಸ್ಪಿ ಶಾಂತವೀರ ವೆಂಕಟೇಶ ದಾಸರ, ಅಪ್ಪಾಸಾಬ ಬರಗಿ ಇತರರಿದ್ದರು.

ಇದಕ್ಕೂ ಮುನ್ನ ಸಂಗೋಳ್ಳಿ ರಾಯಣ್ಣ ವೃತ್ತದಿಂದ ನಗರದ ಶಿವಾಜಿ ವೃತ್ತದವರೆಗೆ ಭಾವಚಿತ್ರ ಮೆರವಣಿಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮೆರವಣಿಗೆಗೆ ಚಾಲನೆ ನೀಡಿದರು. ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಬ್ಯಾಂಜೋ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net