ಅಂಬೇಡ್ಕರ್ ಕನಸನ್ನು ಯುವ ಸಮೂಹ ನನಸಾಗಿಸಲಿ

ಬೆಳಗುಂಬದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿದರು. ಶಿವಮೂರ್ತಿ, ಅಡವಿಸ್ವಾಮಿ, ಜಯಣ್ಣ, ಮಂಜುನಾಥ್, ರಂಗನಾಥ್, ರವಿ, ಪುಟ್ಟಮಲ್ಲೇಗೌಡ, ಬಾಬು ಇದ್ದರು.
ಬೆಳಗುಂಬದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿದರು. ಶಿವಮೂರ್ತಿ, ಅಡವಿಸ್ವಾಮಿ, ಜಯಣ್ಣ, ಮಂಜುನಾಥ್, ರಂಗನಾಥ್, ರವಿ, ಪುಟ್ಟಮಲ್ಲೇಗೌಡ, ಬಾಬು ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ಪರಿಶಿಷ್ಟ ಜಾತಿ, ತಳ ಸಮುದಾಯ ಹಾಗೂ ಮಹಿಳೆಯರಿಗೆ ಸ್ವಾತಂತ್ರೃ ಮತ್ತು ಸಬಲೀಕರಣದ ಮೂಲಕ ಅಂಬೇಡ್ಕರ್ ಧೀಮಂತ ಚೇತನರಾಗಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಸ್ನೇಹ ಜೀವಿ ಅಂಬೇಡ್ಕರ್ ಗೆಳೆಯರ ಬಳಗದಿಂದ  ಆಯೋಜಿಸಿದ್ದ ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರೃ ಪೂರ್ವದಲ್ಲಿ ಜಾತೀಯತೆ ಮತ್ತು ಮೌಢ್ಯ ಮಿತಿ ಮೀರಿತ್ತು. ಅಂದಿನ ಪುರೋಹಿತ ಶಾಹಿ ಸಮಾಜ ಪರಿಶಿಷ್ಟ ಜಾತಿ ಮತ್ತು ತಳ ಸಮುದಾಯಗಳನ್ನು ನಿಷ್ಕೃಷ್ಟವಾಗಿ ನಡೆಸಿ ಕೊಳ್ಳುತ್ತಿತ್ತು. ಈ ಎಲ್ಲ ಅಪಮಾನಗಳನ್ನು ಸ್ವತಃ ಅನುಭವಿಸಿದ ಅಂಬೇಡ್ಕರ್ ಅವರು ಇದಕ್ಕೆಲ್ಲ ಅನಕ್ಷರತೆಯೇ ಕಾರಣ ಎಂಬುದನ್ನು ಅರಿತು ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದರು. ಅವರ ಆಶಯ ಮತ್ತು ಅವರು ಕಂಡ ಕನಸನ್ನು ಇಂದಿನ ಯುವ ಪೀಳಿಗೆ ಸಾಕಾರಗೊಳಿಸಬೇಕಿದೆ ಎಂದರು.

ಮುಖಂಡ ಶಿವಮೂರ್ತಿ ಗುತ್ತಿನಕೆರೆ ಮಾತನಾಡಿ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಮುಂದಿನ ಪೀಳಿಗೆ ಅನುಭವಿಸಬಾರದು ಎಂಬುದನ್ನು ಅರಿತು ಅಂಬೇಡ್ಕರ್ ಮಹಿಳೆಯರ ಸ್ವಾತಂತ್ರೃ ಮತ್ತು ಸಬಲೀಕರಣಕ್ಕೆ ಸಂವಿಧಾನ ಬದ್ಧವಾಗಿ ಶಕ್ತಿ ತುಂಬಿದರು ಎಂದರು.

ನಿವೃತ್ತ ಶಿಕ್ಷಕ ಅಡವಿಸ್ವಾಮಿ ಹಾಗೂ ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಾನಂದಮೂರ್ತಿ ಮಾತನಾಡಿದರು. ಗ್ರಾಮದ ಮುಖ್ಯ ಬೀದಿಗಳಲ್ಲಿ ಅಂಬೇಡ್ಕರ್‌ರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಡಿಜೆ ಸೌಂಡ್ ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿತು.

ಹಸಿರು ಕರ್ನಾಟಕ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಜಯಣ್ಣ ಬೆಳಗುಂಬ, ರವಿ, ತೋಂಟಾರಾಧ್ಯ, ಪುಟ್ಟಮಲ್ಲೇಗೌಡ ಬಾಬು, ಗುತ್ತಿಗೆದಾರ ಮಂಜುನಾಥ್, ಮಂಜುನಾಥ್ ಸಂಕೋಡನಹಳ್ಳಿ, ರಂಗನಾಥ್ ಜಾಜೂರು, ಬೆಳಗುಂಬ ಸ್ನೇಹ ಜೀವಿ ಅಂಬೇಡ್ಕರ್ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net