

ಬಸವನಬಾಗೇವಾಡಿ: ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ ಹಾಗೂ ವರ್ಣರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯದಿಂದ ಭಾನುವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿ ಕಾರ್ಯಕ್ರಮ ನಿಮಿತ್ತ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅವರು ಮಾತನಾಡಿದರು.
ಶರಣರ ಕಾಯಕ ಬದುಕು ಯುವ ಪೀಳಿಗೆಗೆ ದಾರಿ ದೀಪವಾಗಿದೆ. ಶರಣರು ಹೋರಾಟ ಮಾಡಿದ ಉದ್ದೇಶದ ಬಗ್ಗೆ ಯುವಪೀಳಿಗೆ ತಿಳಿದುಕೊಳ್ಳಬೇಕಿದೆ. ಅದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹಡಪದ ಅಪ್ಪಣ್ಣನವರು ಮಾನವ ಜನಾಂಗಕ್ಕೆ ಸಂದೇಶ ನೀಡಿದ್ದಾರೆ ಎಂದರು.
ತಾಲೂಕು ಟಕದ ಅಧ್ಯ ಸಂಜು ಬಿರಾದಾರ, ಶ್ರೀಕಾಂತ ಕೊಟ್ರಶೆಟ್ಟಿ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ, ಅರವಿಂದ ಗೊಳಸಂಗಿ, ಮಂಜುನಾಥ ಜಾಲಗೇರಿ, ಪ್ರಶಾಂತ ಮುಂಜಾನೆ, ಬಸನಗೌಡ ಪಾಟೀಲ, ಮಾಂತೇಶ ಹೆಬ್ಬಾಳ, ಮಲ್ಲು ಪಟ್ಟಣಶೆಟ್ಟಿ, ಬಸವರಾಜ ಅಳ್ಳಗಿ, ವೆಂಕಟೇಶ ಕರಾಡೆ, ಸಂತೋಷ ಚಿಂಚೋಳ್ಳಿ, ವೀರೇಶ ಗಬ್ಬೂರ, ಅರುಣ ಗೊಳಸಂಗಿ, ಮಹೇಶ ಪತ್ತಾರ ಇತರರಿದ್ದರು.