ರಾಷ್ಟ್ರದ ಪ್ರಗತಿಗೆ ಯುವಪೀಳಿಗೆ ಕೈ ಜೋಡಿಸಲಿ

24dvk 1
Published on

ಬೆಳಗಾವಿ: ರಾಣಿ ಚನ್ನಮ್ಮಳ ಧೈರ್ಯ, ತ್ಯಾಗ ಹಾಗೂ ಅಜೇಯ ಮನೋಭಾವನೆಯನ್ನು ಇಂದಿನ ಯುವಪೀಳಿಗೆ ಅವಳವಡಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್​ ಹೇಳಿದರು.

ನಗರದ ರಾಣಿ ಚನ್ನಮ್ಮ ವಿವಿಯ ಕುವೆಂಪು ಸಭಾಭವನದಲ್ಲಿ ತಂಜಾವೂರಿನ ದಣ ವಲಯ ಸಾಂಸತಿಕ ಕೇಂದ್ರ, ಕೇಂದ್ರ ಸಂಸತಿ ಸಚಿವಾಲಯದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮನ ಐತಿಹಾಸಿಕ ವಿಜಯದ 200ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಯುವ ಶಕ್ತಿ ದೇಶದ ಅಭಿವೃದ್ಧಿ ನಿರ್ಧರಿಸಲಿದೆ. ರಾಷ್ಟ್ರ ಪ್ರಗತಿಗೆ ಯುವಕ, ಯುವತಿಯರು ಕೈ ಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಾಹಿತಿ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ರಾಣಿ ಚನ್ನಮ್ಮ ಶ್ರೇಷ್ಠತೆ ಮತ್ತು ಪ್ರೇರಣೆಯ ಶಾಶ್ವತ ಚಿಹ್ನೆ. ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಸಂಗ್ರಾಮಕ್ಕೆ ಕಾರಣವಾಯಿತು. ಚನ್ನಮ್ಮಳ ಧೈರ್ಯವು ಅಸಂಖ್ಯಾತ ಭಾರತೀಯರಿಗೆ ಹೋರಾಟದ ಪ್ರೇರಣೆಯಾಗಿತ್ತು ಎಂದರು.

ಖಾನಾಪುರದ ಎಂ.ಎಂ.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಮುಖ್ಯಸ್ಥೆ, ಲೇಖಕಿ ಡಾ.ವಿಜಯಲ್ಮ ತಿರ್ಲಾಪುರ ಮಾತನಾಡಿ, ರಾಣಿ ಚನ್ನಮ್ಮಳ ಜೀವನ ಚರಿತ್ರೆ, ಹೋರಾಟ ಕುರಿತು ವಿವರಿಸಿದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕೀರಪೂರ, ಕುಲಸಚಿವ ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಸಪ್ನಾ ಎಂ.ಎ., ದಣ ವಲಯ ಸಾಂಸತಿಕ ಕೇಂದ್ರದ ನಿರ್ದೇಶಕ ಸುಂದರ ಬಾಸ್ಕರ, ಸಿಂಡಿಕೇಟ ಸದಸ್ಯ ಡಾ.ಮಹಾಂತೇಶ ಕಂಬಾರ, ಇತರರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸತ ಹಿರಿಯಣ್ಣ ಶೆಟ್ಟಿಗಾರ ತಂತ್ರಾಡಿ ನೇತೃತ್ವದ ಶ್ರೀ ದುರ್ಗಾಪರಮೇಶ್ವರಿ ಯಗಾನ ಕಲಾರಂಗ ತಂಡದಿಂದ ಯಗಾನ ಪ್ರದರ್ಶನಗೊಂಡಿತು.

ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕ ಡಾ.ಹನುಮಂತಪ್ಪ ಡಿ.ಜಿ. ಸ್ವಾಗತಿಸಿದರು. ಅಧ್ಯಯನ ಪೀಠದ ನಿರ್ದೇಶಕಿ ಪೊ.ನಾಗರತ್ನಾ ಪರಾಂಡೆ ಪರಿಚಯಿಸಿದರು. ಸಮೃದ್ಧಿ ರ್ಬವೆ ನಿರೂಪಿಸಿದರು. ಗೋಪಿಕಾ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net