

ದಾವಣಗೆರೆ: ಇಂದಿನ ಯುವಕರು ಪದ್ಮಭೂಷಣ ದಿ. ಡಾ. ನಾ. ಸು. ಹರ್ಡೀಕರ್ ಅವರಂತೆ ಸಾರ್ಥರಹಿತ ಜೀವನ ಹಾಗೂ ದೇಶಪ್ರೇಮ ರೂಢಿಸಿಕೊಳ್ಳಬೇಕು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಟೆ ಹೇಳಿದರು.
ನಗರದ ಭಾರತ ಸೇವಾದಳ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಸಂಸ್ಥೆ ಸಂಸ್ಥಾಪಕ ಪದ್ಮಭೂಷಣ ದಿ. ಡಾ. ನಾ. ಸು. ಹರ್ಡೀಕರ್ ಅವರ 48 ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಡು ಬಡತನದಲ್ಲಿ ಹುಟ್ಟಿ ವಿದೇಶದಲ್ಲಿ ವೈದ್ಯಕೀಯ ಶಾಸ್ತ್ರ ಅಭ್ಯಾಸ ಮಾಡಿದ್ದ ನಾ. ಸು. ಹರ್ಡೀಕರ್, ಭಾರತ ಸ್ವಾತಂತ್ರೃ ಹೋರಾಟದಲ್ಲಿ ಹಿಂದುಸ್ತಾನಿ ಸೇವಾದಳ ಕಟ್ಟಿ ಯುವಕರಿಗೆ ಶಿಸ್ತು- ದೇಶಭಕ್ತಿಯ ಬಗ್ಗೆ ತರಬೇತಿ ನೀಡಿದರು. ದೀನ-ದಲಿತರಿಗೆ ಆಸ್ಪತ್ರೆಗಳನ್ನು ನಿರ್ಮಿಸಿ ಉತ್ತಮ ಆರೋಗ್ಯ, ಚಿಕಿತ್ಸೆ ಕಲ್ಪಿಸಿದರು. ಯುವಜನರು ಅವರ ಆದರ್ಶದಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಹಾಸಭಾವಿ ಕರಿಬಸಪ್ಪ, ವಲಯ ಸಂಘಟಕ ಅಣ್ಣಪ್ಪ ಇತರರಿದ್ದರು.