ಯುವ ಸಮೂಹ ಶಿಕ್ಷಣ, ಸಂಸ್ಕಾರ ಮೈಗೂಡಿಸಿಕೊಳ್ಳಲಿ

ಬೆಟ್ಟದಪುರದ ಡಿಟಿಎಂಎನ್  ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ರಾಜೇಶ್, ರಾಜಶೇಖರ್, ಲಕ್ಷ್ಮೀ, ಮೋಹನ್, ತೋಂಟಪ್ಪಶೆಟ್ಟಿ, ತಮ್ಮಯ್ಯ, ಚಂದ್ರಶೇಖರ್, ಶ್ರೀಶೈಲ, ಪಿ.ರವಿ, ಜೆ.ಸಿ ನಟರಾಜ, ಸಿ.ಟಿ ಗುರುದತ್ತ ಇದ್ದರು.
ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ರಾಜೇಶ್, ರಾಜಶೇಖರ್, ಲಕ್ಷ್ಮೀ, ಮೋಹನ್, ತೋಂಟಪ್ಪಶೆಟ್ಟಿ, ತಮ್ಮಯ್ಯ, ಚಂದ್ರಶೇಖರ್, ಶ್ರೀಶೈಲ, ಪಿ.ರವಿ, ಜೆ.ಸಿ ನಟರಾಜ, ಸಿ.ಟಿ ಗುರುದತ್ತ ಇದ್ದರು.
Published on

ಬೆಟ್ಟದಪುರ: ಶ್ರಮದಿಂದ ಪಡೆದ ಶಿಕ್ಷಣ ಪದವಿಗೆ ಸೀಮಿತವಾಗುವ ಬದಲು ಸಮಾಜ ಸೇವೆಗೆ ಮುಡಿಪಾಗಬೇಕು ಎಂದು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದರು.

ಇಲ್ಲಿನ ಡಿ.ಟಿ.ಎಂ.ಎನ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೇ ನಮ್ಮ ಜೀವನದ ರೂವಾರಿಗಳು. ದೇಶದ ಅಭಿವೃದ್ಧಿ ಇಂದಿನ ಯುವಕರ ಮೇಲಿದ್ದು, ಯುವ ಸಮೂಹ ಶಿಕ್ಷಣ, ಸಂಸ್ಕಾರ, ಮಾನವೀಯತೆ ಮೈಗೂಡಿಸಿಕೊಂಡಲ್ಲಿ ದೇಶ ಅಭಿವೃದ್ಧಿ ಹೊಂದಲಿದೆ ಎಂದರು.

ಪ್ರಾಥಮಿಕ, ಪ್ರೌಢಶಾಲೆ ಬಳಿಕ ವೃತ್ತಿಪರ ಶಿಕ್ಷಣ ಕೋರ್ಸ್‌ಗಳು ಜೀವನದ ಪ್ರಮುಖ ದಾರಿ. ಈ ವಿದ್ಯಾಸಂಸ್ಥೆ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.

ಸಂಸ್ಥೆಯ ಖಜಾಂಚಿ ಪಿ.ರವಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದ್ದು, ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶಾಲೆಯಲ್ಲಿ ಕಲಿತ ಹಲವಾರು ಮಕ್ಕಳು ಪ್ರಸ್ತುತ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ನೀಟ್, ಕೆಸೆಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಬಳಿಕ ಗಣ್ಯರನ್ನು ಅಭಿನಂದಿಸಲಾಯಿತು. ಇದೆ ವೇಳೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಲಕ್ಷ್ಮೀ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮೋಹನ್, ಉದ್ಯಮಿಗಳಾದ ತೋಂಟಪ್ಪಶೆಟ್ಟಿ, ತಮ್ಮಯ್ಯ, ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಪಿ.ರವಿ, ಆಡಳಿತಾಧಿಕಾರಿ ಜೆ.ಸಿ.ನಟರಾಜ, ನಿರ್ದೇಶಕರಾದ ಸಿ.ಟಿ ಗುರುದತ್ತ, ಕೆ.ಎಚ್.ವಿಜಯಕುಮಾರ್, ಎಚ್.ಎಸ್.ಕೃಷ್ಣಮೂರ್ತಿ, ಎಲ್.ಬಿ ಜ್ಞಾನಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net