

ವಿಜಯಪುರ: ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ ಎಂದು ಸಮಾಜ ಸೇವಕ ಫಯಾಜ್ ಕಲಾದಗಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲಯನ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ 21 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಡಾ. ಬಿ.ಆರ್. ಅಂಬೇಡ್ಕರ್ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
ಯುವಕರು ದುಶ್ಚಟಗಳನ್ನು ತ್ಯಜಿಸಿ ಸದೃಢ ದೇಹ ಹೊಂದಲು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 21 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಲಯನ್ಸ್ ಫುಟ್ಬಾಲ್ ತಂಡ ಪ್ರಥಮ, ರಿತೇಶ್ ಫುಟ್ಬಾಲ್ ತಂಡ ದ್ವೀತಿಯ ಮತ್ತು 21 ವರ್ಷ ವಯೋಮಿತಿಯ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ವಿಭಾಗದಲ್ಲಿ ಲಯನ್ಸ್ ಫುಟ್ಬಾಲ್ ತಂಡ ಪ್ರಥಮ ಮತ್ತು ದೇವರ ಹಿಪ್ಪರಗಿಯ ಜಗದಂಬಾ ಫುಟ್ಬಾಲ್ ತಂಡ ದ್ವೀತಿಯ ಸ್ಥಾನ ಪಡೆಯಿತು.
ಮಾಣಿಕೇಶ್ವರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಚಿದಾನಂದ ಅವಟಿ, ಮಾಣಿಕ ಗುಳಸ್ಕರ್, ಎನ್.ಎಂ. ಹುಟಗಿ, ಸಂತೋಷ ರಾಥೋಡ, ವಿಠಲ ಮಳಗಿ, ಕೃಷ್ಣಾ ಗಾಡಿವಡ್ಡರ, ಸತೀಶ ಹಿಪ್ಪರಗಿ, ಹಮೀದ ಜಾಗಿರದಾರ, ಶಿವಪ್ಪ ಕೌಟಗಿ, ಪ್ರಮೋದ ಶೆಟಗಾರ, ಅರವಿಂದ ಅಂಗಡಿ, ಲಕ್ಷಿ$್ಮ ದೊಡ್ಡಮನಿ, ದಾರಾಸಿಂಗ ಪವಾರ ಮತ್ತಿತರರಿದ್ದರು.
ಗಣೇಶ ಬೋಸ್ಲೆ ಸ್ವಾಗತಿಸಿದರು. ಶ್ರೀಧರ ಜೋಶಿ ನಿರೂಪಿಸಿದರು. ಯಲ್ಲಪ್ಪ ಜಂಪ್ಲೆ ವಂದಿಸಿದರು.
ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಫುಟ್ಬಾಲ್ ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫಯಾಜ್ ಕಲಾದಗಿ, ರಾಜಶೇಖರ ದೈವಾಡಿ, ಚಿದಾನಂದ ಅವಟಿ ಮತ್ತಿತರರಿದ್ದಾರೆ.