ಯುವ ಜನತೆ ಜೇನು ಕೃಷಿಯಲ್ಲಿ ತೊಡಗಲಿ

24skpp 2
ಸಕಲೇಶಪುರದಲ್ಲಿ ಜೇನು ಪೋಷಕರ ಸಹಕಾರ ಸಂಘ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಸುರೇಂದ್ರ ಉದ್ಘಾಟಿಸಿದರು. ಬೆಕ್ಕಿನಹಳ್ಳಿ ನಾಗರಾಜ್, ಪ್ರಮೋದ್ ಕುಮಾರ್, ತುಳಸಿಪ್ರಸಾದ್, ಜಯರಾಮ್, ಸತೀಶ್ ಇತರರು ಇದ್ದರು.
Published on

ಸಕಲೇಶಪುರ: ಜೇನು ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷ ಸುರೇಂದ್ರ ಹೇಳಿದರು.

ಪಟ್ಟಣದ ಜೇನು ಪೋಷಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಜೇನು ಉತ್ಪಾದನೆಯಾಗುತ್ತಿದ್ದ ಕಾರಣ ಜೇನು ಉತ್ಪಾದಕರಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಜೇನು ಪೋಷಕರ ಸಹಕಾರ ಸಂಘ ಸ್ಥಾಪನೆಯಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜೇನು ಕೃಷಿಕರ ಸಂಖ್ಯೆ ಕ್ಷೀಣಿಸಿದೆ. ಪರಿಣಾಮ ಮಾರುಕಟ್ಟೆಗೆ ಜೇನು ಒದಗಿಸಲು ಬೇರೆ ರಾಜ್ಯಗಳನ್ನು ಆಶ್ರಯಿಸುವಂತಾಗಿದೆ. ಸದ್ಯ ಜೇನು ಕೃಷಿ ಹೆಚ್ಚಳಕ್ಕಾಗಿ ಸಂಘ ಸಾಕಷ್ಟು ಕಾರ್ಯಕ್ರಮ ವಹಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಯುವ ಜನತೆ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಸಂಘದಲ್ಲಿರುವ ಪ್ರಮಾಣಿಕ ನೌಕರರು ಹಾಗೂ ಕೆಲಸಗಾರರಿಂದಾಗಿ ಸಂಘ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ ಎಂದರು.

ಸಂಘದ ನಿರ್ದೇಶಕರಾದ ಜೈಮಾರುತಿ ದೇವರಾಜ್, ಸುಧೀರ್ ಅವರನ್ನು ಗೌರವಿಸಲಾಯಿತು. ಪ್ಲಾಂಟರ್ಸ್‌ ಬ್ಯಾಂಕ್ ಅಧ್ಯಕ್ಷ ಬೆಕ್ಕಿನಹಳ್ಳಿ ನಾಗರಾಜ್, ಸಂಘದ ನಿರ್ದೇಶಕರಾದ ಪ್ರಮೋದ್ ಕುಮಾರ್, ತುಳಸಿಪ್ರಸಾದ್, ಜಯರಾಮ್, ಇಒ ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net