ಯುವಕರು ರಕ್ತದಾನ ಮಾಡಲಿ

Eid Milad festival
Published on

ಶಿಗ್ಗಾಂವಿ: ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ವಿವೇಕ ಜೈನಕೇರಿ ಹೇಳಿದರು.

ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆಹಬೂಬ ನಗರದ, ನವಜವಾನ ಕಮಿಟಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ಮಹಾಂತೇಶ ಸಾಲಿ ಮಾತನಾಡಿ, ರಕ್ತದಾನದಿಂದ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ರಕ್ತದಾನದಿಂದ ಮತ್ತೊಂದು ಜೀವ ಉಳಿಸಲು ಸಹಾಯ ಆಗುತ್ತದೆ. ಪ್ರತಿಯೊಬ್ಬ ಯುವಕರು ರಕ್ತದಾನ ಮಾಡಬೇಕು ಎಂದರು.

ಡಾ.ದಾವೂದ್ ಸೌದಾಗರ, ಪಿ.ಎಂ. ಬಾಣಿ, ಜಿಲ್ಲಾ ರಕ್ತ ಕೇಂದ್ರ ಅಧೀಕ್ಷಕರಾದ ಬಸವರಾಜ ತಳವಾರ, ಮಲ್ಲಿಕ ತಿಳವಳ್ಳಿ, ಆಶಿಪ ಮಾರಂಬಿಡ, ಶಾರುಖ್ ಮೇಲ್ಮುರಿ, ಹಾಸ್ಮಿಯಬೇಗ್, ರಹಿಂ ನಾಯಕ, ಜಾಫರ ನದಾಫ, ಯಾಕೂಬ್ ಕ್ಯಾಲಕೊಂಡ, ಜಿಲಾನಿ ಮಾರಂಬೀಡ, ಖಾಸೀಂ ಟಪಾಲ, ರೆಹಾನ್ ಕಾರಡಗಿ, ಸಾದಿಕ್ ಗುಜರಾತಿ, ಮುಫ್ತಿ ತಹಶೀಲ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net