ಯುವಕರು ಕ್ರೀಡಾಮನೋಭಾವ ಬೆಳೆಸಿಕೊಳ್ಳಲಿ

ilk 22-3 r
ಇಳಕಲ್ಲ ಶ್ರೀ ನೀಳಕಂಠೇಶ್ವರ ಸ್ಫೋರ್ಟ್ಸ್, ಕಲ್ಚರ್ ಕ್ಲಬ್ ವತಿಯಿಂದ ಸೀಸನ್-2 ಕುರುಹಿನಶೆಟ್ಟಿ ಪ್ರಿಮಿಯರ್ ಲೀಗ್ ಪಂದ್ಯಾವಳಿಯನ್ನು ಕುರುಹಿನಶೆಟ್ಟಿ ಸಮಾಜದ ಕಾರ್ಯಾಧ್ಯಕ್ಷ ಸಿದ್ರಾಮಪ್ಪ ಮನ್ನಾಪೂರ ಉದ್ಘಾಟಿಸಿದರು. ಅಶೋಕ ಶ್ಯಾವಿ, ಅಧ್ಯಕ್ಷ ಸಂತೋಷ ಐಲಿಗೌಡ್ರ, ಮಹಾಂತೇಶ ಕಂಪ್ಲಿ, ಮುಕುಂದಪ್ಪ ಗೋಟೂರ, ಶಿವಪ್ಪ ಜೀರಗಿ, ಈರಣ್ಣ ಗೋಟೂರ, ಮಹಾಂತೇಶ ಮನ್ನಾಪೂರ ಇದ್ದರು.
Published on

ಇಳಕಲ್ಲ: ಇಂದಿನ ದಿನಗಳಲ್ಲಿ ಯುವಕರು ಹಾಗೂ ಮಕ್ಕಳು ಮೊಬೈಲ್ ಗೀಳು ಬಿಟ್ಟು ಕ್ರೀಡೆಯ ಮಹತ್ವ ಅರಿತು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಕುರುಹಿನಶೆಟ್ಟಿ ಸಮಾಜದ ಕಾರ್ಯಾಧ್ಯಕ್ಷ ಸಿದ್ರಾಮಪ್ಪ ಮನ್ನಾಪೂರ ಹೇಳಿದರು.

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ಸ್ಫೋರ್ಟ್ಸ್ ಮತ್ತು ಕಲ್ಚರ್ ಕ್ಲಬ್ ಸೀಸನ್-2 ಕುರುಹಿನಶೆಟ್ಟಿ ಪ್ರಿಮೀರ್ ಲೀಗ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷ ಅಶೋಕ ಶ್ಯಾವಿ ಮಾತನಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷ, ನೀಲಕಂಠೇಶ್ವರ ಸ್ಫೋರ್ಟ್ಸ್ ಹಾಗೂ ಕಲ್ಚರ್ ಕ್ಲಬ್ ಅಧ್ಯಕ್ಷ ಸಂತೋಷ ಐಲಿಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಳಕಲ್ಲ ಅರ್ಬನ್ ಬ್ಯಾಂಕ್ ನೂತನ ಉಪಾಧ್ಯಕ್ಷ ಮಹಾಂತೇಶ ಕಂಪ್ಲಿ, ಸಮಾಜದ ಹಿರಿಯ ಮುಕುಂದಪ್ಪ ಗೋಟೂರ, ಶಿವಪ್ಪ ಜೀರಗಿ, ಈರಣ್ಣ ಗೋಟೂರ, ಮಹಾಂತೇಶ ಮನ್ನಾಪೂರ, ಶಿವಪ್ಪ ಮುಗಣಿ, ನೀಲಕಂಠೇಶ್ವರ ತರುಣ ಸಂಘದ ಅಧ್ಯಕ್ಷ ರಾಘವೇಂದ್ರ ಗೋಟೂರ, ಉಪಾಧ್ಯಕ್ಷರಾದ ಆನಂದ ಬೆನ್ನೂರ, ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷ ವಿಜಯಲಕ್ಷ್ಮೀ ಪೋಚಗುಂಡಿ, ಶಿಕ್ಷಕಿರಾದ ಪ್ರೇಮಲತಾ ಬಗನಾಳ ಇತರರಿದ್ದರು.

ನೀಲಕಂಠೇಶ್ವರ ಸ್ಫೋರ್ಟ್ಸ್ ಹಾಗೂ ಕಲ್ಚರ್ ಕ್ಲಬ್‌ನ ಎಲ್ಲ ಪದಾಧಿಕಾರಿಗಳು, ಸಮಾಜದ ಗುರುಹಿರಿಯರು, ತರುಣ ಸಂಘದ ಸದಸ್ಯರು, ಮಹಿಳಾ ಮಂಡಳಿಯರು ಭಾಗವಹಿಸಿದ್ದರು. ಶಾಂಭವಿ ಬೆನ್ನೂರ ಪ್ರಾರ್ಥಿಸಿದರು. ಗುಂಡಪ್ಪ ಕುರಿ ಹಾಗೂ ಮಹೇಂದ್ರ ಬೆನ್ನೂರ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net