

ಆಲಮೇಲ: ಬ್ರಿಟಿಷರ ಆಳ್ವಿಕೆ ಮುಕ್ತಗೊಳಿಸಲು ಅಸಂಖ್ಯಾತ ಮಹಾನ್ ಸ್ವಾತಂತ್ರೃ ಹೋರಾಟಗಾರರು ಜೀವನ ಮುಡಿಪಾಗಿಟ್ಟ ಪ್ರತಿಲದಿಂದ ಭಾರತ ಸ್ವಾತಂತ್ರೃ ಗಳಿಸಲು ಸಾಧ್ಯವಾಯಿತು ಎಂದು ತಹಸೀಲ್ದಾರ್ ಸುರೇಶ ಚಾವಲರ್ ಹೇಳಿದರು.
ಪಟ್ಟಣದ ಇಂಡಿ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಹಾಗೂ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರೃ ದೊರೆತಿದ್ದು ಯುವಜನತೆ ಸ್ವಾಭಿಮಾನದ ಜೊತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಭವ್ಯ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು. ಯುವಜನತೆ ದೇಶದ ಆಸ್ತಿಯಾಗಿದ್ದು, ಅವರ ಏಳಿಗೆಯಾದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಹೇಳಿದರು.
ನಿರ್ಮಲಾಲಯ ಶಾಲೆಯ ಸಹ ಶಿಕ್ಷಕ ಮಹಾಂತಗೌಡ ಹಳೇಮನಿ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸುರೇಶ್ ಚಾವಲರ್ ಹಾಗೂ ಪಿಎಸ್‌ಐ ಅರವಿಂದ ಅಂಗಡಿ ಸಾರ್ವಜನಿಕರಿಗೆ ಸ್ವಾತಂತ್ರೊೃೀತ್ಸವದ ಶುಭಾಶಯ ತಿಳಿಸಿದರು. ನಂತರ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್‌ಗಾರ್ಡ್, ಶಾಲಾ ಮಕ್ಕಳಿಂದ ಪರೇಡ್ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಯಾ ಶಾಲಾ ತಂಡಗಳಿಗೆ ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ತಾಪಂ ಮುಖ್ಯ ಇಒ ರೀದಾ ಪಠಾಣ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ರವಿ ಬಿರಾದಾರ, ಕಂದಾಯ ನಿರೀಕ್ಷಕ ಎಂ.ಎ.ಅತ್ತಾರ, ಶಿರಸ್ತೇದಾರ ಪಿ.ಎಸ್.ಮುಕಿಹಾಳ, ಪಪಂ ಸಿಬ್ಬಂದಿ ಬಿ.ಜಿ.ನಾರಾಯಣಕರ, ಲಾಲಸಾಬ ದೇವರಮನಿ, ಸೈಪನ್ ವಾಲೀಕಾರ ಇತರರಿದ್ದರು.