ಯುವಕರು ಸಾಹಿತ್ಯದ ಒಲವು ಬೆಳೆಸಿಕೊಳ್ಳಲಿ

Untitled-2
ಆನೇಕಲ್​ ಮರಸೂರು ಗೇಟ್​ನಲ್ಲಿರುವ ಸ್ಪೂರ್ತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶಾಲಾ ಆರಾಧ್ಯ ಅವರ ಜೀರ್​ ಜೀರ್​ ಜೀರ್ಜಿಂಬೆ ಕಥಾ ಸಂಕಲನವನ್ನು ಶಾಸಕ ಬಿ.ಶಿವಣ್ಣ ಲೋಕಾರ್ಪಣೆ ಮಾಡಿದರು. ಸಾಹಿತ್ಯ ಪರಿಷತ್​ ಆನೇಕಲ್​ ತಾಲೂಕು ಅಧ್ಯ ಆದೂರು ಪ್ರಕಾಶ್​, ಶಿಣ ಸಂಪನ್ಮೂಲ ವ್ಯಕ್ತಿ ಡಾ. ಜಿ.ಮುನಿರಾಜು, ಡಾ.ರಾಜಶ್ರೀ ಕಿಶೋರ್​ ಇದ್ದರು.
Published on

ಆನೇಕಲ್​ : ಯುವಕರು ಸಾಹಿತ್ಯದ ಒಲವು ಬೆಳೆಸಿಕೊಂಡು ಜಾಗೃತರಾಗಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ತಾಲೂಕಿನ ಮರಸೂರು ಗೇಟ್​ನಲ್ಲಿರುವ ಸ್ಪೂರ್ತಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಆನೇಕಲ್​ ವಿಧಾನಸಭಾ ಕ್ಷೇತ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಕವನಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿಶಾಲಾ ಆರಾಧ್ಯ ಅವರ ಜೀರ್​ ಜೀರ್​ ಜೀರ್ಜಿಂಬೆ ಕಥಾ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದರು.

ಕಥೆ ನಾಟಕಕಾರ ಡಾ.ಬೇಲೂರು ರುನಂದನ್​ ಮಾತನಾಡಿ, ಮಕ್ಕಳ ಜಗತ್ತು ಮುಗ್ಧತೆಯಿಂದ ಕೂಡಿದ್ದು, ಸರಿಯಾಗಿ ಬೆಳೆಸುವ ಹಾದಿಯನ್ನು ಶಿಕರು ನಿರ್ಮಿಸಬೇಕು. ಶಿಣ ಅಲ್ಪ ಮಾನವನಿಂದ ವಿಶ್ವಮಾನವನನ್ನಾಗಿ ಮಾಡುವ ಬಹುದೊಡ್ಡ ಅಸ್ತ್ರವಾಗಿದೆ ಯುವಕರು ಹೆಚ್ಚು ಹೆಚ್ಚು ಸಾಹಿತ್ಯದಲ್ಲಿ ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.

ಅಂಬೇಡ್ಕರ್​ ಕವನ ಸ್ಪರ್ಧೆಯಲ್ಲಿ ವಿಜೇತರಾದ ಗಂಧರ್ವ ರಾವ್​, ರಾವತ್​, ಶಿವರಾಜ್​, ವತ್ತು ಮುರುವಣಿ, ಮಧು ಕಾರಗಿ, ಕೆರವಡಿ ಆಶಾ, ಮಧುಸೂದನ್​, ಸೂರ್ಯಕಿರಣ್​ ಅವರಿಗೆ ಬಹುಮಾನ ವಿತರಿಸಲಾಯಿತು. ಯೋಗ ಗುರುಗಳಾದ ಶಾಮಣ್ಣ ಸ್ವಾಮಿ, ರಾಮಣ್ಣ ಸ್ವಾಮಿ, ಟಿ.ಕೆ ವಿಧಾತ್​, ಚಿಕ್ಕಹಾಗಡೆ ಡಾ.ವೈ.ಚಿನ್ನಪ್ಪ, ಸ್ಪೂರ್ತಿ ಕಾಲೇಜಿನ ಸರಸ್ವತಿ ಗೋಪಾಲ್​ ರೆಡ್ಡಿ, ವಿನಯ್​, ನಾಗೇಂದ್ರ, ಸಿಡಿಹೊಸಕೋಟೆ ಶ್ರೀನಾಥ್​, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್​, ಕವಿ ಸತ್ಯವತಿ, ಶ್ರೀವಲ್ಲಿ ಶೇಷಾದ್ರಿ, ಆದೂರು ಪ್ರಕಾಶ್​, ಅಪ್ಸರ್​ ಆಲಿಖಾನ್​, ಚುಟುಕು ಶಂಕರ್​, ವ್ಯಾಪಾರಿ ನಾರಾಯಣ್​ ಇದ್ದರು.

ಸಮಾಜಕ್ಕೆ ನಿರಂತರವಾಗಿ ಕೊಡುಗೆಗಳನ್ನು ನೀಡುತ್ತಾ ಸಾಗಿದರೆ ಮುಂಬರುವ ದಿನಗಳಲ್ಲಿ ಸೃಜನಶೀಲ ಸಮಾಜ ನೋಡಲು ಸಾಧ್ಯವಾಗುತ್ತದೆ. ಲೋಕದ ಸಂತೋಷವನ್ನು ಬಯಸಿದ ಡಾ.ಅಂಬೇಡ್ಕರ್​ ಅವರು ಇತಿಹಾಸ ಪುರುಷರಾಗಿ ಉಳಿದಿದ್ದಾರೆ, ಅವರ ತ್ಯಾಗ ಪರಿಶ್ರಮ ಎಲ್ಲ ಜನರು ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿಕೊಟ್ಟಿದೆ. | ಎಂ.ಪ್ರಕಾಶ್​ ಮೂರ್ತಿ ಜಿಲ್ಲಾ ಸಾಹಿತ್ಯ ಪರಿಷತ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net