

ಗೋಕಾಕ: ಧಾರ್ಮಿಕ ಆಚರಣೆಗಳಿಂದ ನಮ್ಮ ದೇಶ ಸುಖ&ಶಾಂತಿಯೊಂದಿಗೆ ಸಮದ್ಧಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಆದಿತ್ಯ ನಗರದ ಆಂಜನೇಯ ದೇವರ ಕಾರ್ತಿಕೋತ್ಸವ ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇವರ ಅನುಗ್ರಹದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ಯುವಪೀಳಿಗೆ ಸುಸಂಸತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ನಗರಕ್ಕೆ ಮೂಲಸೌಲಭ್ಯಗಳನ್ನು ಕಲ್ಪಿಸಿ ಸರ್ವಾಂಗೀಣ ಅಭಿವದ್ಧಿ ಮಾಡುತ್ತಿದ್ದೇವೆ. ಇನ್ನು ಹಲವಾರು ಯೋಜನೆಗಳ ಅನುಷ್ಠಾನ ಮಾಡಲಾಗುವುದು ಎಂದರು.
ನಗರಸಭೆ ಅಧ್ಯ ಪ್ರಕಾಶ ಮುರಾರಿ, ಸದಸ್ಯರಾದ ಸಿದ್ದಪ್ಪ ಹುಚ್ಚರಾಮಗೋಳ, ಅರ್ಚನಾ ಮಾಳಗಿ, ಆಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯ ಕೆಂಚಪ್ಪ ಗೌಡಪ್ಪಗೋಳ, ಸದಸ್ಯರಾದ ರಮೇಶ ಮಾವಿನಗಿಡದ, ಸಂಜೀವ ಕದಂ, ಪಂಡಿತಪ್ಪ ಕಂಬಳಿ, ಯಲ್ಲಪ್ಪ ಪೂಜೇರಿ, ದೇವೇಂದ್ರ ತಳವಾರ, ಮಹಾಲಿಂಗ ನಾಗನ್ನವರ, ಅಶೋಕ ದಯನ್ನವರ, ಚಂದ್ರಶೇಖರ ಕಾಡನ್ನವರ, ಲಕ್ಷ$್ಮಣ ಓಜಪ್ಪಗೋಳ, ಚಿದಾನಂದ ಮೆಣಶಿನಕಾಯಿ, ರುದ್ರಪ್ಪ ವಾಲಿ, ಸಂತೋಷ ಗುದಗಗೋಳ ಉಪಸ್ಥಿತರಿದ್ದರು.