ಯುವ ಸಮುದಾಯ ರಕ್ತದಾನಕ್ಕೆ ಮುಂದಾಗಲಿ

11Athanigrameen1 SPONCER-200
Published on

ಅಥಣಿ ಗ್ರಾಮೀಣ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ರಕ್ತದಾನ ಮಾಡುವುದು ಪುಣ್ಯದ ಕೆಲಸ. ಹಾಗಾಗಿ ಯುವಜನಾಂಗ ರಕ್ತದಾನಕ್ಕೆ ಮುಂದಾಗಬೇಕು ಎಂದು ಮುಖಂಡ ಬಾಬಣ್ಣ ಸಾರವಾಡ ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಾನ ಮಾಡುವುದರಿಂದ ಅಪಘಾತ, ಅನಾರೋಗ್ಯ ಮುಂತಾದ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವ ಜನರಿಗೆ ಸಹಾಯವಾಗುತ್ತದೆ. ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ದೈಹಿಕ ಶಿಕ್ಷಕ ಸಿದ್ದಪ್ಪ ಸಿಜೋಳಿ ಮಾತನಾಡಿ, ದಾನಗಳಲ್ಲಿ ರಕ್ತದಾನ ಶ್ರೇಷ್ಠ. ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ರಕ್ತದಾನ ಸಹಕಾರಿಯಾಗುತ್ತದೆ. ರಕ್ತದಾನ ಕುರಿತು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಜಾತ್ರೆ ಸಂಪನ್ನ: ಬೆಳಗ್ಗೆ ಬಸವೇಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಪ್ರಾಥಮಿಕ, ಪ್ರೌಢವಿಭಾಗ ಮಕ್ಕಳಿಗೆ ಶರಣರ ವಚನ ಸ್ಪರ್ಧೆ, ಮಧ್ಯಾಹ್ನ ಸಂಗ್ರಾಮ ಕಲ್ಲು, ಗುಂಡು ಕಲ್ಲು, ಚೀಲ ಎತ್ತುವ ಸ್ಪರ್ಧೆಗಳು ರಂಜಿಸಿದವು. ಸಂಜೆ ವಿವಿಧ ಕಲಾವಿದರಿಂದ ಕಲಾ ಪ್ರದರ್ಶನ ನಡೆದು ಜಾತ್ರೆ ಸಂಪನ್ನಗೊಂಡಿತು.

ಗಾಯತ್ರಿ ಕುಂಬಾರ, ಮಲ್ಲು ಪಟ್ಟಣಶೆಟ್ಟಿ, ಚಂದ್ರಶೇಖರ ಬೆಳ್ಳಂಕಿ, ಮಹಾಂತೇಶ ಬುದ್ನಿ, ಸಂಜು ನಾಯಿಕ, ಸಂಗಮೇಶ ಖೋತ, ಗಿರೀಶ ನಾಯಿಕ, ಶಿವಪುತ್ರ ಹುಲಸಾದ, ತುಕಾರಾಮ ಖೋತ, ಮಂಜು ಹುಲಸದಾರ, ಶಿವಾಜಿ ಚವ್ಹಾಣ, ಭೀಮಪ್ಪ ಕಿತ್ತೂರ, ಗಿರೀಶ ಬಳ್ಳಿಗೇರಿ, ಸಹದೇವ ಅರಗೊಡ್ಡಿ, ದುರಂದರ ಭೋಸಲೆ, ಸಚಿನ ನಾಯಿಕ, ಶಿವಾನಂದ ಜತ್ತಿ, ಮಹಾಂತೇಶ ಗಲಗಲಿ, ಮಹೇಶ ಖೋತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net