

ಚನ್ನರಾಯಪಟ್ಟಣ: ಪ್ರತಿಯೊಬ್ಬರೂ ರಕ್ತದ ಮಹತ್ವ ತಿಳಿದು, ರಕ್ತದಾನ ಮಾಡಬೇಕು.ಆದರಲ್ಲೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು.
ಪಟ್ಟಣದಲ್ಲಿನ ವೈದ್ಯ ಸ್ಕೂಲ್ ಆಫ್ ನಸಿರ್ಂಗ್ ಹಾಗೂ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲ ಬಿ.ಎಲ್.ಅರುಣ್‌ಕುಮಾರ್ ಅವರ 39ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅರುಣ್‌ಕುಮಾರ್ ಅವರು ಸಾಮಾಜಿಕ ಕಳಕಳಿಯುಳ್ಳ ಮನಷ್ಯ. ಅವರು ಸದಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದ್ದು, ಅವರ ಸಂಸ್ಥೆಯ ನಸಿರ್ಂಗ್ ವಿದ್ಯಾರ್ಥಿಗಳನ್ನು ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಾದ ಡೆಂೆ, ಚಿಕೂನ್‌ಗುನ್ಯಾ ಸಾಂಕ್ರಾಮಿಕ ರೋಗಗಳು ಮತ್ತು ಏಡ್ಸ್ ಸೇರಿದಂತೆ ಕೆಲ ರೋಗಗಳ ಕಡಿವಾಣಕ್ಕೆ ನಡೆಸಲಾಗುವ ಅರಿವು, ಜಾಥಾಗಳಿಗೆ ಕಳುಹಿಸಿಕೊಡುವುದು ಸೇರಿದಂತೆ ಲಾರ್ವ ಸಮೀಕ್ಷೆ, ಪಲ್ಸ್ ಪೋಲಿಯೋದಂತಹ ಕಾರ್ಯಕ್ರಮಗಳಲ್ಲಿ ಪಟ್ಟಣದ ಮನೆಮನೆಗಳಿಗೆ ತೆರಳಿ ಯಶ್ವಸಿಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದಾರೆ. ಇನ್ನು ಅವರ ಪ್ರತಿವರ್ಷದ ಹುಟ್ಟುಹಬ್ಬಕ್ಕೆ ಅಯೋಜಿಸುವ ರಕ್ತದಾನ ಶಿಬಿರದಲ್ಲಿ ತಾವು ಸೇರಿ ತಮ್ಮ ಕುಟುಂಬದ ಮಂದಿ ರಕ್ತದಾನದಲ್ಲಿ ಭಾಗಿಯಾಗಿ ಸಾಮಾಜಿಕ ಕಳಕಳಿ ಸಾರುತ್ತಾರೆ ಎಂದರು.
ಪ್ರಾಂಶುಪಾಲ ಅರುಣ್‌ಕುಮಾರ್ ಹುಟ್ಟಹಬ್ಬದ ಸಲುವಾಗಿ ನಡೆದ ರಕ್ತದಾನ ಶಿಬಿರದ ನೇತೃತ್ವದವನ್ನು ಹಾಸನದ ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್‌ನವರು ವಹಿಸಿದ್ದರು. ವೈದ್ಯ ಸ್ಕೂಲ್ ಆಫ್ ನಸಿರ್ಂಗ್‌ನ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸುಮಾರು 50 ಜನರು ರಕ್ತದಾನ ಮಾಡಿದರು. ಅರುಣ್ ಕುಮಾರ್ ಅವರ ಸ್ನೇಹಿತರು, ಹಿತೈಷಿಗಳು ಅರುಣ್ ಅವರ ಕೈಯಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.
ವೀರ ಸಮರಸೇನೆ ಜಿಲ್ಲಾಧ್ಯಕ್ಷ ಭರತ್‌ಗೌಡ, ವೈದ್ಯ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲ ಬಿ.ಎಲ್.ಅರುಣ್‌ಕುಮಾರ್, ಮಾತೃಭೂಮಿ ವೃದ್ಧಾಶ್ರಮದ ಕಾರ್ಯದರ್ಶಿ ವಿಕ್ರಮ್ ಜೈಹಿಂದ್, ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್‌ನ ಮೋಹನ್ ಇತರರು ಇದ್ದರು.