ಯುವಜನರು ದೇಶಸೇವೆಗೆ ಮುಂದಾಗಲಿ

web2
ಹಂಚಿನಾಳ ಗ್ರಾಮದಲ್ಲಿ ನಿವೃತ್ತ ಯೋಧ ಬಸವರಾಜ ಅಗಡಿ ಅವರಿಗೆ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಸತ್ಕಾರ ಕಾರ್ಯಕ್ರಮಕ್ಕೆ ಫಲಹಾರೇಶ್ವರ ಮಠದ ಶಿವಮೂರ್ತಿ ಸಾಮೀಜಿ ಮತ್ತು ಮಲ್ಲಪ್ಪ ಹೂಗಾರ ಚಾಲನೆ ನೀಡಿದರು. ಸಂಗಯ್ಯ ಸಂಗಳಹಿರೇಮಠ, ವೀರಪ್ಪ ಅಗಡಿ, ಸೋಮಯ್ಯ ಬೆಳವಟಗಿಮಠ ಇತರರು ಇದ್ದರು.
Published on

ಬೆಳಗಾವಿ: ಗಾಳಿ, ಮಳೆ, ಚಳಿಯಲ್ಲಿ ಪ್ರಾಣ ಲೆಕ್ಕಿಸದೆ 20 ವರ್ಷಗಳ ಕಾಲ ಸುಧೀರ್ಘ ದೇಶಸೇವೆಯೊಂದಿಗೆ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧ ಬಸವರಾಜ ಅಗಡಿ ಅವರ ಕಾರ್ಯ ಶ್ಲಾಘನೀಯ ಎಂದು ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸಾಮೀಜಿ ಹೇಳಿದರು.

ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಭಾನುವಾರ ನಿವೃತ್ತ ಯೋಧ ಬಸವರಾಜ ಅಗಡಿ ಅವರಿಗೆ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ,
ಮನೆಮನೆಗೊಬ್ಬ ದೇಶಸೇವಕ ಹುಟ್ಟಿಕೊಳ್ಳಬೇಕು. ಯುವಕರು ದೇಶಸೇವೆಗಾಗಿ ಮುಂದೆ ಬರುವಂತೆ ಪಾಲಕರು ಪ್ರೇರೆಪಿಸಬೇಕು ಎಂದರು. ಕವಿ ನಾಗೇಶ ನಾಯ್ಕ ಮಾತನಾಡಿ, ದೇಶದ ಆಧಾರ ಸ್ತಂಭವಾಗಿರುವ ಯೋಧ, ಶಿಕ್ಷಕ, ರೈತರನ್ನು ಸದಾ ಸ್ಮರಿಸಬೇಕು ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿದರು. ಯೋಧ ಬಸವರಾಜನನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ನಿವೃತ್ತ ಯೋಧರು, ಪತ್ರಕರ್ತರು, ವಕೀಲರು, ಶಿಕ್ಷಕರು, ಗಣ್ಯರಿಗೆ ಸನ್ಮಾನ ನೆರವೇರಿತು. ಸಂಗಯ್ಯ ಸಂಗಳಹಿರೇಮಠ, ಕೃಷ್ಣರಡ್ಡಿ ಗಂಗಲ, ನಿವೃತ್ತ ಶಿಕ್ಷಕರಾದ ವೀರಪ್ಪ ಅಗಡಿ, ಡಿ.ಎಲ್.ಬೆಟಸೂರ, ಸೋಮಯ್ಯ ಬೆಳವಟಗಿಮಠ, ಗಣ್ಯರಾದ ಸಿದ್ಧಪ್ಪ ಜಾಡರ, ಮಲ್ಲಪ್ಪ ಹೂಗಾರ, ರಾಘವೇಂದ್ರ ನಾಯ್ಕ, ಬಸವರಾಜ ಪಟ್ಟಣಶೆಟ್ಟಿ, ಶಿವಕುಮಾರ ಗಾಣಿಗೇರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಮುತ್ತಿನ, ಎಂ.ಎನ್.ಪಾಟೀಲ, ಜೆ.ವಿ.ಅಗಡಿ, ಬಸು ಶಿರಕೋಳ, ಗೋವಿಂದರಡ್ಡಿ ಶ್ರೀಹರಿ, ನಾಗಪ್ಪ ಹೂಗಾರ, ಪಾಂಡು ಶ್ರೀಹರಿ, ಪರ್ವತಗೌಡ ಪಾಟೀಲ ಇತರರಿದ್ದರು. ಫಕೀರಪ್ಪ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ಫೂರ್ತಿ ಅಗಡಿ ಪ್ರಾರ್ಥಿಸಿದರು. ಬಾಲು ಮುಶ್ಯೆನ್ನವರ ಪರಿಚಯಿಸಿದರು. ಈರಣ್ಣ ಜಾಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net