ಯುವಕರು ಉದ್ಯೋಗಪತಿಗಳಾಗಲಿ

jkd 23-2 timmapur
ಜಮಖಂಡಿ ನಗರದ ಮೋತಿಬಾ ಗಲ್ಲಿಯಲ್ಲಿ ನೂತನ ಮಹಮ್ಮದಸಾದ್.ಟಿ.ಪಾರ್ಥನಳ್ಳಿ ಅವರ ಮಾಲಿಕತ್ವದಲ್ಲಿನ ಪಾರ್ಥನಳ್ಳಿ ಲ್ಯಾಂಡ ಡೆವಲಪರ್ಸ್‌ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸಿ ಮಾತನಾಡಿದರು. ತೌಫೀಕ್ ಪಾರ್ಥನಳ್ಳಿ, ಮಾಮುನ್ ರಶೀದ್ ಪಾರ್ಥನಳ್ಳಿ, ಉದ ಸಾರವಾಡ, ರಾಜು ಭಾಗವಾನ, ಮೊಹಮ್ಮದ್ ರಫೀಕ್ ಮನಿಯಾರ್ ಇತರರಿದ್ದರು.
Published on

ಜಮಖಂಡಿ: ಯುವಕರು ದುಶ್ಚಟಗಳ ದಾಸರಾಗದೆ ವಿವಿಧ ಉದ್ಯೋಗ ಕೈಗೊಂಡು ಕುಟುಂಬ, ಸಮಾಜಕ್ಕೆ ಕೊಡುಗೆ ನೀಡಬೇಕಲ್ಲದೆ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಪತಿಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದ ಮೋತಿಬಾ ಗಲ್ಲಿಯಲ್ಲಿ ನೂತನ ಮಹಮ್ಮದಸಾದ್ ಟಿ. ಪಾರ್ಥನಳ್ಳಿ ಅವರ ಮಾಲೀಕತ್ವದಲ್ಲಿನ ಪಾರ್ಥನಳ್ಳಿ ಲ್ಯಾಂಡ್ ಡೆವಲಪರ್ಸ್‌ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಕೇವಲ ಸರ್ಕಾರಿ ನೌಕರಿ ಎನ್ನದೆ ಇಂತಹ ಉದ್ಯೋಗದಲ್ಲಿ ತೊಡಗಿ ಮಾದರಿಯಾಗಬೇಕು. ಪಾರ್ಥನಳ್ಳಿ ಕುಟುಂಬ ತಾವು ಉದ್ಯೋಗದಲ್ಲಿ ತೊಡಗಿ ಬೇರೊಬ್ಬರಿಗೆ ಉದ್ಯೋಗ ನೀಡುವ ಸಹಕಾರ ಮನೋಭಾವ ಹೊಂದಿದ್ದಾರೆ ಎಂದರು.

ತೌಫೀಕ್ ಪಾರ್ಥನಳ್ಳಿ, ಮಾಮುನ್ ರಶೀದ್ ಪಾರ್ಥನಳ್ಳಿ, ಉದ ಸಾರವಾಡ, ರಾಜು ಭಾಗವಾನ, ಮೊಹಮ್ಮದ್ ರಫೀಕ್ ಮನಿಯಾರ್, ಶಫೀಕ್ ಬೇಪಾರಿ, ಸೂರಜ್ ಕುಡ್ರಾಣಿ, ಮಲ್ಲು ಮಠ, ಅಬೂಬಕ್ಕರ್ ಕುಡಚಿ, ಶಂಕರ ಕಾಂಬಳೆ, ಅಶ್ರ್ ಪಠಾಣ, ೈಸಲ್ ದ್ರಾಕ್ಷಿ, ಮಹಿಬೂಬ ತಾಳಿಕೋಟಿ ಇತರರಿದ್ದರು.

ಸದನದಲ್ಲಿ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸರಿಯಾದುದಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಸೀಯರಿಗೆ ವಿಶೇಷ ಸ್ಥಾನಮಾನವಿದೆ. ಅದನ್ನರಿಯದೆ ಮಾತನಾಡಿರುವುದು ತಪ್ಪು. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಸಚಿವ ತಿಮ್ಮಾಪೂರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಸದನದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಷಾ ಅವರು ದೇಶಕ್ಕೆ ಸಂವಿಧಾನ ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅಗೌರವವಾಗಿ ಮಾತನಾಡಿ ಮಹಾನ್ ನಾಯಕರಿಗೆ ಅವಮಾನಿಸಿದ್ದು ಖಂಡನೀಯ. 3 ದಶಕಗಳಿಂದ ರಾಜಕೀಯ ಜೀವನದಲ್ಲಿದ್ದು, ಸದನದಲ್ಲಿ ಕಂಡರಿಯದ ಸನ್ನಿವೇಷ ಮತ್ತು ಮಾತು ಹೇಳಿಕೆಗಳನ್ನು ಇಂದು ಕೇಳುತ್ತಿರುವುದು ಅಸಹ್ಯಕರವಾಗಿದೆ. ರಾಜಕೀಯ ಮೌಲ್ಯಗಳನ್ನು ಗಾಳಿಗೆ ತೂರುವ ಜನಪ್ರತಿನಿಧಿಗಳು ಬರುತ್ತಿರುವುದು ಸದನಕ್ಕೆ ಅಗೌರವವಾಗುತ್ತಿದೆ. ರಾಜಕೀಯಕ್ಕೆ ಹಿಂದೆ ಇದ್ದ ಮೌಲ್ಯ ಇಂದು ಮಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net