ಜನಪದ ಬದುಕು ಯುವಕರಿಗೆ ಮಾರ್ಗದರ್ಶನವಾಗಲಿ

Savakka
Published on

ಶಿಗ್ಗಾಂವಿ: ಜಾನಪದ ಹಾಡು, ಜನಪದ ಬದುಕು ಮತ್ತು ಸಂಸ್ಕೃತಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕಿದೆ ಎಂದು ಜಾನಪದ ವಿವಿ ಉಪನ್ಯಾಸಕಿ ಡಾ. ಸುಮಂಗಲಾ ಅತ್ತಿಗೇರಿ ಹೇಳಿದರು.

ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ದತ್ತಿ ಪ್ರಶಸ್ತಿ ಪುರಸ್ಕೃತೆ ಜಾನಪದ ಗಾಯಕಿ ಸಾವಕ್ಕ ಓಲೇಕಾರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿ ಅರಿತು ಮೈಗೂಡಿಸಿಕೊಂಡು ಬದುಕಬೇಕು. ಅಂದಾಗ ಮಾತ್ರ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಎಲೆಮರೆ ಕಾಯಿಯಂತಿರುವ ಸಾವಕ್ಕ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿದ್ದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿದ ಸಾವಕ್ಕ ಓಲೇಕಾರ ಅವರು ಸೋಬಾನ, ಜೋಗುಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಜಾನಪದ ಹಾಡುಗಳನ್ನು ಹಾಡಿದರು.

ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಎಸ್. ಬರದೇಲಿ, ಎಂ.ಎಸ್. ಕುರಂದವಾಡ, ಕೆ.ಸಿ. ಹೂಗಾರ, ಅನ್ನಪೂರ್ಣ ಅಂಕಲಕೋಟಿ, ಗೀತಾ ಸಾಲ್ಮನಿ, ಸುಮಿತ್ರಾ ರಾಮಾಪೂರಮಠ, ಮಹೇಶ ಲಕ್ಷ್ಮೇಶ್ವರ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net