ಸೇವಾ ಕ್ಷೇತ್ರದಲ್ಲಿ ಯುವಜನ ಸಕ್ರಿಯರಾಗಲಿ

24 HHR P 06 (1)
ಯಡೇಹಳ್ಳಿಯಲ್ಲಿ ಲಯನ್ಸ್ ಭವನ ನಿರ್ಮಾಣ ಸಹಾಯಾರ್ಥ ತರಳಬಾಳು ಕಲಾ ಸಂಘದವರು ನಡೆಸಿಕೊಟ್ಟ ಜಾನಪದ ಸಿರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಲ್ಲಕಂಬ ಸಾಹಸ ಪ್ರದರ್ಶಿಸಿದರು.
Published on

ಹೊಳೆಹೊನ್ನೂರು: ಕ್ಲಬ್‌ನ ಸೇವಾ ಕ್ಷೇತ್ರ ವಿಸ್ತರಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಉಪಾಧ್ಯಕ್ಷ ಶಂಕರ್ ಹೇಳಿದರು.
ಶನಿವಾರ ಸಮೀಪದ ಯಡೇಹಳ್ಳಿಯಲ್ಲಿ ಲಯನ್ಸ್ ಕ್ಲಬ್‌ನ ನೂತನ ಭವನ ನಿರ್ಮಾಣ ಸಹಾಯಾರ್ಥ ಹಮ್ಮಿಕೊಂಡಿದ್ದ ತರಳಬಾಳು ಕಲಾ ಸಂಘದವರು ನಡೆಸಿಕೊಟ್ಟ ಜಾನಪದ ಸಿರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಜಾಗ ಗುರುತಿಸಿದ್ದು ಸದ್ಯದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸಮಾಜದ ಕಡೆಯ ಫಲಾನುಭವಿಗೂ ಸೇವೆಯ ಪ್ರಯೋಜನ ಲಭಿಸಬೇಕು. ಕ್ಲಬ್ ಸಹಯೋಗದಲ್ಲಿ ಅನೇಕ ಸಮಾಜಮುಖಿ ಕಾರ್ಯ ನಡೆಸಲಾಗುವುದು. ಯಡೇಹಳ್ಳಿ ಕ್ಲಬ್ ಜಿಲ್ಲೆಯಲ್ಲಿ ಗುರುತಿಸುವಂತಾಗಿದೆ. ಯುವ ಜನತೆ ಬಹುಪಾಲು ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಬೇಕು. ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿದವರನ್ನು ಸಮಾಜ ಮರೆಯುವುದಿಲ್ಲ ಎಂದರು. ಕಾರ್ಯದರ್ಶಿ ನಾಗೇಶ್, ಖಜಾಂಚಿ ಚಿನ್ನಯ್ಯ, ಎಂ.ಪಾಲಕ್ಷಪ್ಪ, ಬಸಪ್ಪ, ಕೃಷ್ಣೋಜಿ ರಾವ್, ಎಸ್.ಸಿದ್ದಲಿಂಗಪ್ಪ, ಪಿ.ಆರ್.ಮಾವುರಪ್ಪ ಪೂಜಾರ್, ಕಿರಣ್‌ಕುಮಾರ್, ದಿನೇಶ್, ನಂದೀಶ್, ದೇವರಾಜ್, ಮೃತ್ಯುಂಜಯಸ್ವಾಮಿ, ಯುವರಾಜ್, ಎಂ.ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net