

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿವಾಜಿ ಮಹಾರಾಜರು ಜಾತಿವಾದಿ ಆಗಿರದೆ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರು. ಇಂದಿನ ಮಕ್ಕಳಿಗೆ ಶಿವಾಜಿಯ ಆದರ್ಶ ಅಗತ್ಯವಾಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ದತ್ತಪಿಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ದೇವಗಿರಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ತಮಗಾಗಿ ಬದುಕದೆ, ಸಮಾಜ, ಬಡವರು, ಧರ್ಮಕ್ಕಾಗಿ ಬದುಕಿದವರು. ಹೀಗಾಗಿ ಶಿವಾಜಿ ಹೆಸರು ಸೂರ್ಯ ಚಂದ್ರ ಇರುವವರೆಗೂ ಇದ್ದೇ ಇರುತ್ತದೆ. ಶಿವಾಜಿ ಮಹಾರಾಜರಿಗೆ ತಂದೆ, ತಾಯಿ, ಗುರುಗಳ ಮೇಲೆ ಅಪಾರ ಭಕ್ತಿ ಇತ್ತು. ಇಂತಹ ಶಿವಾಜಿ ಮಹಾರಾಜರ ಆದರ್ಶಗಳನ್ನು ಇಂದಿನ ಮಕ್ಕಳು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.
ಮರಾಠಾ ಸಮುದಾಯ ರಾಜಕೀಯವಾಗಿ ಬೆಳೆದಿಲ್ಲ. ಅದಕ್ಕೆ ಸಂಟನೆಯ ಕೊರತೆ ಕಾರಣ. ಹೀಗಾಗಿ ಸಂಟಿತರಾಗಿ ಉತ್ತಮ ಹಂತಕ್ಕೆ ಬೆಳೆಯಬೇಕು. ಸಮಾಜದ ಒಳಿತಿಗೆ ಹಳಿಯಾಳದಲ್ಲಿ ಗುರುಕುಲ ಆರಂಭಿಸುತ್ತಿದ್ದು, ಅಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಲಾಗುತ್ತದೆ ಎಂದರು.
ಆರ್ಎಸ್ಎಸ್ನ ಶ್ರೀಧರ ನಾಡಗೀರ, ಪ್ರೊ. ಸತೀಶ ಜಾಧವ, ಶ್ರೀಕಾಂತ ಗಾಯಕವಾಡ, ಸುರೇಶ ಕರಿಗೌಡರ, ಕಲಕೇರಿ ಗ್ರಾಪಂ ಅಧ್ಯೆ ಭೀಮವ್ವ ಮರೇವಾಡ, ಹಿರಿಯರಾದ ತಾನಾಜಿ ದುರ್ಗಾಯಿ, ಪಂಚಾಯತಿ ಸದಸ್ಯರಾದ ಮಾರುತಿ ಬಾಂಗಡಿ ಸೇರಿ, ಗ್ರಾಮಸ್ಥರು, ಇತರರು ಇದ್ದರು.
ಶಂಕರ ಪಾಗೋಜಿ ಸ್ವಾಗತಿಸಿದರು. ಸೋಮಲಿಂಗ ಯಂಕಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ನಿರೂಪಿಸಿದರು.