ಯುವಕರು ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಲಿ

Untitled design (7)
ಸಂಡೂರು ತಾಲೂಕು ಕುರೇಕುಪ್ಪದ ಎಸ್ಸಿ ಕಾನಿಯಲ್ಲಿ ಅಂಬೇಡ್ಕರ್ ಯುವಕ ಸಂಘ ಮತ್ತು ನಾಮಫಲಕ ಭಾನುವಾರ ಉದ್ಘಾಟನೆ ಮಾಡಲಾಯಿತು. ಪ್ರಮುಖರಾದ ಎಸ್.ಮಲಿಯಪ್ಪ, ನಾಗರಾಜ, ಹೋನ್ನುರಪ್ಪ, ಹೆಚ್.ಪಂಪಾಪತಿ ಇತರರಿದ್ದರು.
Published on

ಸಂಡೂರು: ಯುವಕರು ಅನವಶ್ಯ ಮೊಬೈಲ್ ಬಳಕೆ ಮಾಡುವುದನ್ನು ಬಿಟ್ಟು ಓದಿನ ಕಡೆಗೆ ಗಮನಹರಿಸಬೇಕು ಎಂದು ಪುರಸಭೆ ಸದಸ್ಯ ಎನ್.ಸೋಮಪ್ಪ ಹೇಳಿದರು.


ತಾಲೂಕಿನ ಕುರುಕುಪ್ಪದ ಎಸ್ಸಿ ಕಾನಿಯಲ್ಲಿ ನೂತನ ಅಂಬೇಡ್ಕರ್ ಯುವಕ ಸಂಘ ಮತ್ತು ನಾಮಫಲಕ ಉದ್ಘಾಟನೆ ಮಾಡಿ ಭಾನುವಾರ ಮಾತನಾಡಿದರು.

ಸಂವಿಧಾನ ರಚನೆ ಮಾಡುವ ಮೂಲಕ ಅಂಬೇಡ್ಕರ್ ನಮಗೆಲ್ಲಾ ದಾರಿ ದೀಪವಾಗಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಹುದ್ದೆ ಪಡೆಯಬೇಕು ಎಂದರು.

ಇದನ್ನೂ ಓದಿ: ನಿಡ್ಪಳ್ಳಿ, ಇರ್ದೆ, ಶಾಂತಿಗೋಡು ಅಂಬೇಡ್ಕರ್ ಭವನ ಅಪೂರ್ಣ
ಪುರಸಭೆ ಸದಸ್ಯರಾದ ಕಲ್ಗುಡಪ್ಪ, ಲಕ್ಷ್ಮೀ ವಸಗೇರಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷೆ ಪುಷ್ಪಾವತಿ ಮಂಜುನಾಥ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕೆ.ಈರಣ್ಣ, ದೊಡ್ಡ ತಿಪ್ಪಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಗಿರಿಯಪ್ಪ,

ಸಂಘದ ಉಪಾಧ್ಯಕ್ಷ ಉಮಾಪತಿ, ಪ್ರಮುಖರಾದ ಎಸ್.ಮಲಿಯಪ್ಪ ಮಾದಾಪುರ, ನಾಗರಾಜ ಹೋನ್ನುರಪ್ಪ, ಅನಿಲ, ಹೆಚ್. ಪಂಪಾಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net