ಯುವ ಪೀಳಿಗೆ ಅನುಭವ ಮಂಟಪದ ಸಂದೇಶ ಅರಿತುಕೊಳ್ಳಲಿ

Let the younger generation understand the message of the Anubhav Mantapa
ತೇರದಾಳ ಪಟ್ಟಣದ ಬಸವ ವೃತ್ತದಲ್ಲಿ ಬಸವ ರಥಯಾತ್ರೆಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಗೌತಮ ರೋಡಕರ, ಸದಾಶಿವ ಹೊಸಮನಿ ಮತ್ತಿತರರಿದ್ದಾರೆ.
Published on

ತೇರದಾಳ: ಮೌಢ್ಯ ಸಮಾಜದಲ್ಲಿನ ಜಾತಿ, ಲಿಂಗ ಬೇಧಗಳನ್ನು ತೊರೆದು ಸರ್ವಜಾತಿಯ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅನುಭವ ಮಂಟಪ ರಚಿಸಿ, ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುದೇವರ ಅಧ್ಯಕ್ಷತೆಯಲ್ಲಿ ಜಗತ್ತಿಗೆ ಸಮಾನತೆ ಸಾರಿದ ಬಸವಣ್ಣನವರ ಅನುಭವ ಮಂಟಪದ ಸಂದೇಶವನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣಕ್ಕೆ ಭಾನುವಾರ ಆಗಮಿಸಿದ ಕೂಡಲಸಂಗಮ ಅನುಭವ ಮಂಟಪ ಬಸವರಥ ಯಾತ್ರೆಗೆ ಚಾಲನೆ ನೀಡಿ, ಬಸವ ಮೂರ್ತಿಗೆ ಪುಷ್ಪ ಮತ್ತು ಕರ್ಪೂರದಾರತಿ ಮಾಡಿ ಅವರು ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರ ವಚನ ಸಾಹಿತ್ಯವು ನಾಡಿನ ಬಹುದೊಡ್ಡ ಆಸ್ತಿಯಾಗಿದೆ. ವಿಶ್ವದ ಮೊದಲ ಅಧಿವೇಶನ ಪ್ರಾರಂಭಿಸಿದ ಬಸವಯಾತ್ರೆಯು ಇಂದು ಅಲ್ಲಮಪ್ರಭುವಿನ ಕ್ಷೇತ್ರದಲ್ಲಿ ನಡೆಯುತ್ತಿರುವುದು ಶರಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂದರು.

ಬಸವ ಮೂರ್ತಿಗೆ ಪುಷ್ಪಾರ್ಪಣೆ ಮಾಡಲಾಯಿತು. ರಥಯಾತ್ರೆಯು ಬಸವ ವೃತ್ತದಿಂದ ಪ್ರಾರಂಭಗೊಂಡು ಹಿರೇಮಠ, ಐಟಿಐ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ವಾದ್ಯಮೇಳಗಳು ರಥಯಾತ್ರೆಗೆ ಕಳೆತುಂಬಿದವು.

ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಪಿಎಸ್‌ಐ ಅಪ್ಪು ಐಗಳಿ, ಮುಖಂಡರಾದ ಗೌತಮ ರೋಡಕರ, ಅಪ್ಪು ಮಂಗಸೂಳಿ, ಕುಮಾರ ಸರಿಕರ, ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ಸದಾಶಿವ ಹೊಸಮನಿ, ಶಂಕರ ಕುಂಬಾರ, ಕೇದಾರಿ ಪಾಟೀಲ, ವಿಠ್ಠಲ ತಟ್ರಿ, ಸಚಿನ ಕೊಡತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net