ಯುವ ಜನರು ಜೀವನ ಮೌಲ್ಯ ರೂಪಿಸಿಕೊಳ್ಳಲಿ

mysore
Published on

ಮೈಸೂರು: ಶಿಕ್ಷಣದೊಂದಿಗೆ ಜಾನಪದ, ಸಾಂಸ್ಕೃತಿಕ ಚಟುವಟಿಕೆಗಳ ಕೌಶಲಗಳು ಮುಖ್ಯವಾಗಿದೆ ಎಂದು ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ ಹೇಳಿದರು.


ಕರ್ನಾಟಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ಮೊದಲನೇ ವಾರ್ಷಿಕೋತ್ಸವ, ಕರ್ನಾಟಕ ರತ್ನಶ್ರೀ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.


ಯುವ ಜನರು ಜೀವನ ರೂಪಿಸಿಕೊಳ್ಳುವ ಕೌಶಲ, ಮಾನವೀಯ ಮೌಲ್ಯಗಳಿಗೆ ಒತ್ತು ಕೊಡುವ ಅಂಶಗಳನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಗಳಿಸಿದ ಪದವಿ ವ್ಯರ್ಥ ಎಂದರು.


ಅಕ್ಷರದ ಜತೆಗೆ ಪಠ್ಯೇತರ ಚಟುವಟಿಕೆ ಸಹ ಕಲಿಯಬೇಕು. ಆದರೆ, ಜೀವನದಲ್ಲಿ ಹೃದಯವಂತಿಕೆ ಬೆಳೆಸಿಕೊಳ್ಳುವ ಮನಸ್ಥಿತಿ ದೂರವಾಗುತ್ತಿದೆ. ನಾನು, ನನ್ನದು ಎಂಬ ಮನೋಭಾವ ಅಧಿಕವಾಗುತ್ತಿದೆ. ಮನುಷ್ಯ-ಮನುಷ್ಯರನ್ನು ನಂಬುವ ಸ್ಥಿತಿ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಶಿಕ್ಷಣ ಕ್ಷೇತ್ರದೊಂದಿಗೆ ಕ್ರೀಡಾ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸಬೇಕು. ಈ ಎರಡು ಕ್ಷೇತ್ರಗಳು ಬೆಳವಣಿಗೆಯಾಗಬೇಕಾದರೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳತ್ತ ಆಸಕ್ತಿ ಬೆಳೆಯಲಿದೆ ಎಂದರು.


ಮಜಾಭಾರತ, ಗಿಚ್ಚಿಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ವಂಗೀಪುರ ನಂಬಿಮಠದ ಶ್ರೀ ಇಳೈಆಳ್ವಾರ್ ಸ್ವಾಮೀಜಿ, ದೊಡ್ಡಬಳ್ಳಾಪುರ ಶಕ್ತಿ ಸ್ವರೂಪಿಣಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಧರ್ಮದರ್ಶಿ ಡಾ.ಅನುಮ್ಮ, ಮಾನವ ಹಕ್ಕುಗಳ ಸೇವಾ ಸಮಿತಿಯ ಡಾ.ಸೀತಾರಾಮೇಗೌಡ, ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಡಾ.ಎಸ್.ಮರಿದೇವಯ್ಯ, ಸಂಘಟನೆಯ ಪದಾಧಿಕಾರಿಗಳಾದ ನಟರಾಜು, ಮೌಲ್ಯಾ, ಹೇಮಲತಾ ಎನ್.ರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net