ಯುವ ವಕೀಲರು ಕಲಾಪಗಳಲ್ಲಿ ಪಾಲ್ಗೊಳ್ಳಲಿ

web4
ಖಾನಾಪುರದ ಜೆಎಂಎ್ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶ ನಿವಾಸದ ಭೂಮಿಪೂಜೆ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಾಧೀಶ ಪಿ.ಎಸ್.ದಿನೇಶಕುಮಾರ್ ಉದ್ಘಾಟಿಸಿದರು. ಐ.ಆರ್.ಘಾಡಿ, ಜರೀನಾ, ಚೇತನ ಮನೇರಿಕರ್, ಜಯಶ್ರೀ, ಎಲ್.ವಿಜಯಲಕ್ಷ್ಮೀದೇವಿ ಇತರರು ಇದ್ದರು.
Published on

ಖಾನಾಪುರ: ವ್ಯವಸ್ಥೆಯ ನಿರ್ಲಕ್ಷ್ಯದಿಂದ ನ್ಯಾಯಕ್ಕಾಗಿ ಪರದಾಡುತ್ತಿರುವವರಿಗೆ ಸರಿಯಾದ ಮತ್ತು ತ್ವರಿತ ನ್ಯಾಯ ಒದಗಿಸುವ ಮೂಲಕ ಸಾಮಾನ್ಯ ಜನರಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಮೂಡಿಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಪಿ.ಎಸ್.ದಿನೇಶಕುಮಾರ್ ಹೇಳಿದರು.

ಇಲ್ಲಿನ ಜೆಎಂಎ್ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ನಿವಾಸದ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು. ಉದಯೋನ್ಮುಖ ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಹಿರಿಯರಿಂದ ಕಲಿಯಲು ಪ್ರಯತ್ನಿಸಿ. ಯಾವುದೇ ರೀತಿಯ ಪ್ರಕರಣದಲ್ಲಿ ಹೋರಾಡುವಾಗ, ಅದನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. ಜ್ಞಾನ ಮತ್ತು ಅನುಭವದ ಮೂಲಕ ನ್ಯಾಯ ಕೊಡಿಸಲು ಬದ್ಧರಾಗಿರಿ ಎಂದರು.

ವಕೀಲರ ಸಂಘದ ಅಧ್ಯಕ್ಷ ಐ.ಆರ್.ಘಾಡಿ ಮಾತನಾಡಿ, ಜನಹಿತಕ್ಕಾಗಿ ವಕೀಲ ವತ್ತಿಯು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಈ ಕ್ಷೇತ್ರದ ಪಾವಿತ್ರ್ಯ ಕಾಪಾಡುವ ಮಹತ್ವದ ಜವಾಬ್ದಾರಿ ವಕೀಲ ವರ್ಗದ ಮೇಲಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಜರೀನಾ, ಚೇತನ ಮನೇರಿಕರ್, ಜಯಶ್ರೀ, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಎಲ್.ವಿಜಯಲಕ್ಷ್ಮೀದೇವಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿಮೋಹನ್ ರೆಡ್ಡಿ, ನ್ಯಾಯಮೂರ್ತಿ ಸೂರ್ಯನಾರಾಯಣ, ನ್ಯಾಯಮೂರ್ತಿ ವಿರೇಶ ಹಿರೇಮಠ, ವಿ.ಎನ್.ಪಾಟೀಲ, ಎಚ್.ಎನ್.ದೇಸಾಯಿ, ಆರ್.ಎನ್.ಪಾಟೀಲ, ಎಸ್. ಕೆ. ನಂದಗಡಿ, ಅನಿಲ್ ಲೋಕರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net