ಪೈಲ್ವಾನರಿಗೆ ಗೌರವಧನ ನೀಡಿ ಪ್ರೋತ್ಸಾಹಿಸಲಿ

3sambaragi2
Published on

ಸಂಬರಗಿ: ಪೈಲ್ವಾನ್‌ರ ಸಂಖ್ಯೆ ಹೆಚ್ಚಿಸಲು ಸರ್ಕಾರ ಪ್ರತಿ ಗ್ರಾಮದಲ್ಲಿ ಗರಡಿಮನೆ ಪ್ರಾರಂಭಿಸಿ, ಪೈಲ್ವಾನರಿಗೆ ಗೌರವ ಧನ ನೀಡಿ ಪ್ರೋತ್ಸಾಹಿಸಬೇಕು ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಅಣ್ಣಾಸಾಹೇಬ ನಂದಿವಾಲೆ ಒತ್ತಾಯಿಸಿದರು.

ಲಕ್ಷ್ಮೀವಾಡಿ ಗ್ರಾಮದ ಜೈ ಹನುಮಾನ ಜಾತ್ರಾ ಮಹೋತ್ಸವ ಹಾಗೂ ಓಕುಳಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಮಾತನಾಡಿದರು. ಕುಸ್ತಿಯಲ್ಲಿ ಪೈಲ್ವಾನ್ ಶಂಕರ ಮಾಯನಟ್ಟಿ ಪೈಲ್ವಾನ್ ಪರಶುರಾಮ ಬ್ಯಾಕೂಡ ವಿರುದ್ಧ ಗೆದ್ದು ಪ್ರಥಮ ಬಹುಮಾನ ಹಾಗೂ ಬೆಳ್ಳಿ ಗಧೆ ಪಡೆದರು.

ಸಾಂಗಲಿ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು. ಜಾತ್ರಾ ಕಮಿಟಿ ಮುಖಂಡ ರಾಜು ನಂದಿವಾಲೆ, ಚನ್ನಪ್ಪ ನಂದಿವಾಲೆ, ಸತ್ತೆಪ್ಪ ಪೂಜಾರಿ, ಸುರೇಶ ಬೋರಗಾವ, ಶಂಕರ ಶರಣರು ಅಡಹಳ್ಳಟ್ಟಿ, ಸುರೇಶ ವಾಘಮೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net