ಕೂಲಿಕಾರರಿಗೆ ಕಾಯಕಬಂಧುಗಳಿಂದ ಮೋಸವಾಗದಿರಲಿ

BYD KAYAKABANDHU
Published on

ಬ್ಯಾಡಗಿ: ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾಯಕ ಬಂಧುಗಳು ಕೂಲಿಕಾರರಿಗೆ ದೊರಕುವ ಸೌಲಭ್ಯ ಮಾಹಿತಿ ನೀಡುವ ಮೂಲಕ ಸಕಾಲಕ್ಕೆ ಕೂಲಿ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಬೇರೆಡೆ ಕೆಲಸಕ್ಕೆ ತೆರಳದಂತೆ ಗ್ರಾಮದಲ್ಲಿ ಕೂಲಿ ಒದಗಿಸಬೇಕು ಎಂದು ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ಸುವರ್ಣಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಪಂ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾಯಕ ಬಂಧು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನರೇಗಾ ಸಮರ್ಪಕವಾಗಿ ಅನುಷ್ಟಾನಗೊಳಿಸದಿದ್ದರೆ ಗ್ರಾಮೀಣ ಭಾಗದ ಕೂಲಿಕಾರ್ವಿುಕರ ಆರ್ಥಿಕ ತೊಂದರೆ ಉಂಟಾಗಲಿದೆ. ಗ್ರಾಮೀಣ ಪ್ರದೇಶಗಳ ಸರ್ವಾಗೀಣ ಅಭಿವೃದ್ಧಿಗೆ ಪಂಚಾಯಿತಿಗಳು ಒತ್ತು ನೀಡಬೇಕಿದೆ. ಯಾವುದೇ ಕಾರಣಕ್ಕೂ ಕೂಲಿಕಾರರಿಗೆ ಮೋಸವಾಗಬಾರದು. ನಿಮಗೆ ಕೆಲಸದ ಸಮಯದಲ್ಲೇ ಎದುರಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ತಿಳಿದುಕೊಳ್ಳುವಲ್ಲಿ ತರಬೇತಿ ಕಾರ್ಯಕ್ರಮ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 50ಕ್ಕೂ ಹೆಚ್ಚು ಕಾಯಕಬಂಧುಗಳು ಪಾಲ್ಗೊಂಡಿದ್ದರು.

ಶಿಬಿರದಲ್ಲಿ ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಬಿದರಿ, ಎಸ್.ಡಿ. ಬಳಿಗಾರ ತಾಂತ್ರಿಕ ಸಂಯೋಜಕ ಸಂತೋಷ ನಾಯಕ, ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ, ಶೃತಿ ಅಂಗರಗಟ್ಟಿ, ಮಂಜುನಾಥ ಬಿದರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net