ಕಾರ್ಮಿಕರಿಗೆ ಸವಲತ್ತು ಲಭಿಸಲಿ

HNR-labour
Published on

ಹೊನ್ನಾವರ: ಅಟೋಮೊಬೈಲ್ ಮತ್ತು ಗ್ಯಾರೇಜ್ ಮಾಲೀಕರ ಹಾಗೂ ಕಾರ್ಮಿಕರ ಸಂಘಟನೆಗೆ ಸೂಕ್ತ ಸವಲತ್ತುಗಳು ಸಿಗುವಂತಾಗಬೇಕು ಎಂದು ಪ.ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ ಹೇಳಿದರು.

ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಅಟೋಮೊಬೈಲ್ ಮತ್ತು ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕರ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಕಾನೂನು ಸಲಹೆಗಾರ ವಿಕ್ರಮ ನಾಯ್ಕ ಮಾತನಾಡಿ, ಅಟೋಮೊಬೈಲ್, ಗ್ಯಾರೇಜು ಮಾಲೀಕರು ಮತ್ತು ಕಾರ್ಮಿಕರಲ್ಲಿ ಶಿಸ್ತು ಇದೆ. ಬೆವರು ಸುರಿಸಿ ದುಡಿದ ಹಣದಲ್ಲಿ ಬಡವರಿಗೆ ಸಹಕಾರ ನೀಡುತ್ತಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದೆ. ಸಂಘವು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದರು.

ಸಂಘದ ಅಧ್ಯಕ್ಷ ಮಂಜುನಾಥ ಬಾಂದಿ ಅಧ್ಯಕ್ಷತೆ ವಹಿಸಿದ್ದರು. ವಾಸು ದೇವಾಡಿಗ ಸ್ವಾಗತಿಸಿದರು. ಗಣಪತಿ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ನಾಯ್ಕ ವಂದಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ ಶಾಸ್ತ್ರಿ, ಕಾರ್ಯದರ್ಶಿ ಗೋಪಾಲಕೃಷ್ಣ ನಾಯ್ಕ, ಕೋಶಾಧ್ಯಕ್ಷ ಸಾದಿಕ್, ಎಂ.ಆರ್.ಹೆಗಡೆ, ದಾಮೋದರ ಮೇಸ್ತ ಇತರರಿದ್ದರು.

ಯಕ್ಷಗಾನ ಭಾಗವತಿಕೆಯಲ್ಲಿ ಸಾಧನೆ ಮಾಡುತ್ತಿರುವ ಚಿಂತನಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ನಡೆಯಿತು. ರಾತ್ರಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ಜನಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net