ಸನಾತನ ಧರ್ಮ ಉಳಿಸುವ ಕೆಲಸವಾಗಲಿ

ನಂಜನಗೂಡಿನ ಶಂಕರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗೋಪಿನಾಥ್ ಉದ್ಘಾಟಿಸಿದರು. ರಾಘವೇಂದ್ರ ಶರ್ಮ,  ಸುನಾದ, ವಿನೋದಿನಿ, ಮಂಜುಳಾ ಇದ್ದರು.
ನಂಜನಗೂಡಿನ ಶಂಕರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗೋಪಿನಾಥ್ ಉದ್ಘಾಟಿಸಿದರು. ರಾಘವೇಂದ್ರ ಶರ್ಮ, ಸುನಾದ, ವಿನೋದಿನಿ, ಮಂಜುಳಾ ಇದ್ದರು.
Published on

ನಂಜನಗೂಡು: ಪಟ್ಟಣದ ಸೃಜನ ಸೇವಾಭಿವೃದ್ಧಿ ನ್ಯಾಸ್ ಬ್ರಾಹ್ಮಣ ಸಂಘಟನೆಯಿಂದ ಭಾನುವಾರ ಶಂಕರ ಮಠದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಂಕರ ಮಠದ ಅರ್ಚಕ ವೇದಬ್ರಹ್ಮ ಶ್ರೀ ರಾಘವೇಂದ್ರ ಶರ್ಮ, ನಮ್ಮ ಸನಾತನ ಧರ್ಮ ಉಳಿಯಬೇಕಾಗಿದ್ದು, ಈ ನಿಟ್ಟಿನಲ್ಲಿ ಯಾವ ಹೆಜ್ಜೆ ಇಡಬೇಕು ಎಂಬುದರ ಕುರಿತು ಆಲೋಚಿಸಬೇಕು ಎಂದು ಸಲಹೆ ನೀಡಿದರು.

ಟ್ರಸ್ಟಿ ಸಾವಿತ್ರಮ್ಮ ಮಾತನಾಡಿ, ಪ್ರತಿಭಾ ಕಾರಂಜಿಗೆ ಈ ಹಿಂದೆ 3 ಬಹುಮಾನ ನೀಡಲಾಗುತ್ತಿತ್ತು. ಇದೀಗ ಹೆಚ್ಚು ಮಕ್ಕಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ 4 ಬಹುಮಾನ ಕೊಡಲು ತೀರ್ಮಾನಿಸಲಾಗಿದೆ ಎಂದರು.

ಸಂಘಟನೆ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಬ್ರಾಹ್ಮಣ ಸಮಾಜದ ಯಾವುದೇ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾದಲ್ಲಿ ನನ್ನನ್ನು ಸಂಪರ್ಕಿಸಿದರೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳ ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ನ್ಯಾಸ್‌ನ ಅಧ್ಯಕ್ಷ ಗೋಪಿನಾಥ್, ಸಂಗೀತ ಶಾಲೆ ಶಿಕ್ಷಕಿ ಮಂಜುಳಾ, ಬ್ರಾಹ್ಮಣ ಸಂಘಟನೆ ಉಪಾಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಶ್ರೀಕಂಠ ಮೂರ್ತಿ , ಪ್ರತಿಭಾ ಕಾರಂಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಸೃಜನ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗುರುರಾಜ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net