ಮನೆಗೊಂದು ಸಸಿ ನೆಡುವ ಕೆಲಸವಾಗಲಿ

Sindhnur Envemnt
ಸಿಂಧನೂರಿನ ಹೊರ ವಲಯದಲ್ಲಿರುವ ಶ್ರೀ ಕೃಷ್ಣದೇವರಾಯ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಉದ್ಯಮಿ ಸುರೇಶ ನೆಕ್ಕಂಟಿ, ಪ್ರಮುಖರಾದ ಸತ್ಯನಾರಾಯಣ, ವೆಂಕಟೇಶ್ವರರಾವ್, ಡಾ.ಮೊಹಮ್ಮದ್ ಅಸ್ಲಂಖಾನ್ ಇತರರಿದ್ದರು.
Published on

ಸಿಂಧನೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಮನೆಗೊಂದು ಸಸಿ ನೆಡುವ ಕೆಲಸವಾಗಬೇಕು ಎಂದು ಪರಿಸರ ಪ್ರೇಮಿ ಹಾಗೂ ಉದ್ಯಮಿ ಸುರೇಶ ನೆಕ್ಕಂಟಿ ಹೇಳಿದರು.

ನಗರದ ಹೊರವಲಯದಲ್ಲಿರುವ ಶ್ರೀ ಕೃಷ್ಣದೇವರಾಯ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಅನೇಕ ಕಡೆಗಳಲ್ಲಿ ನೆಟ್ಟಿದ್ದ ಗಿಡಗಳು ಈಗ ಮರವಾಗಿ ಎಲ್ಲರಿಗೂ ನೆರಳು ನೀಡುತ್ತಿರುವುದು ಖುಷಿ ಕೊಟ್ಟಿದ್ದು, ಜೀವನವೇ ಸಂತೃಪ್ತಿ ಎನಿಸಿದೆ. ನೆಟ್ಟ ಸಸಿಗಳ ಸಂರಕ್ಷಣೆ, ಪೋಷಣೆ ಹೊಣೆಗಾರಿಕೆ ಜನರು ಹೊಂದಬೇಕಿದೆ. ಶಾಲಾ ಆವರಣ, ದೇವಸ್ಥಾನ ವಾರ್ಡ್‌ಗಳಲ್ಲಿಯೂ ಸಸಿಗಳನ್ನು ನೆಡಲಾಗಿದೆ ಎಂದರು.

ಸಂಸ್ಥೆ ಉಪಾಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ವೆಂಕಟೇಶ್ವರರಾವ, ಸಿಇಒ ಡಾ.ಮೊಹಮ್ಮದ್ ಅಸ್ಲಂಖಾನ್, ಪ್ರಾಚಾರ್ಯೆ ಚಂದ್ರಕಲಾ ಪ್ರಕಾಶ, ಅಕ್ಷರ ಅಕಾಡೆಮಿಯ ಶಿವಶೇಖರ, ದೇವರೆಡ್ಡಿ, ಪತ್ರಪ್ಪ, ಸುಬ್ಬಾರಾವ್, ವೆಂಕಟೇಶ, ಬಾಲಕೃಷ್ಣ, ಪ್ರಸಾದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net