

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಕೆಲಸ ಸಮಾಜದಿಂದ ನಿರಂತರವಾಗಿ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿನ ಜನಸಂಪರ್ಕ ಕಚೇರಿಯಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಇತ್ತೀಚೆಗೆ ಸನ್ಮಾನಿಸಿ ಮಾತನಾಡಿದ ಅವರು, ಪ್ರತಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕ ಹಿರಿಯರು ನಮ್ಮ ನಡುವೆ ಇದ್ದಾರೆ. ಅವರ ಚಿಂತನೆ ಹಾಗೂ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಮೊದಲಿನಿಂದಲೂ ಸಂಕನೂರ ಅವರು ಸಂಸ್ಕೃತಿ ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯದಿಂದ ಸಾಧಕರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಮೋಹನ ಸಿದ್ದಾಂತಿ, ಮಲ್ಲಿಕಾರ್ಜುನ ಚಿಕ್ಕಮಠ, ಅರವಿಂದ ಕುಕಲರ್ಣಿ, ಶಂಕರ ಹಲಗತ್ತಿ, ಡಾ. ಬಿ.ಆರ್. ರಾಠೋಡ್ ಮಾತನಾಡಿದರು.
ರಮಣಶ್ರೀ ಪ್ರಶಸ್ತಿ ಪಡೆದ ಡಾ. ವೀರಣ್ಣ ರಾಜೂರ, ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲೂಸಿ ಸಾಲ್ಡಾನ, ಸಹಕಾರರತ್ನ ಪ್ರಶಸ್ತಿ ಪಡೆದ ನ್ಯಾಯವಾದಿ ಕೆ.ಎಲ್ ಪಾಟೀಲ, ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕ ಬಸವರಾಜ ಕುಂದಗೋಳಮಠ, ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಶಂಕರ ಹಲಗತ್ತಿ, ರಂಗಕಲಾವಿದೆ ರಜನಿ ಗರೂಡ, ವಿಲ್ಸನ ಮೈಲಿ, ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ, ಡಾ. ಉಮೇಶ ಹಳ್ಳಿಕೇರಿ ಅವರಿಗೆ ಸನ್ಮಾನಿಸಲಾಯಿತು.
ಲತಾ ಮಳ್ಳೂರ, ವಿ.ಡಿ. ಕಾಮರಡ್ಡಿ, ಸಿದ್ದಲಿಂಗಸ್ವಾಮಿ ಬೆಂತೂರಮಠ, ಎಲ್.ಐ. ಲಕ್ಕಮ್ಮನವರ, ರಮೇಶ ಛಲವಾದಿ, ಇತರರು ಇದ್ದರು. ಪ್ರೊ. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಎನ್.ಟಿ. ಕಾಖಂಡಕಿ ವಂದಿಸಿದರು.