ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಲಿ

23 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಂಗವಿಕಲರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗಬೇಕು. ಅವರಿಗೆ ಎಲ್ಲ ಸರ್ಕಾರಿ ಸೌಲಭ್ಯಗಳು ತಲುಪಬೇಕು. ಸರ್ಕಾರಿ ಸೌಲಭ್ಯಗಳು ಅಂಗವಿಕಲರಿಗೆ ಒದಗಿಸುವ ಕೆಲಸವನ್ನು ಅಧಿಕಾರಿಗಳು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಸಹ ಪ್ರಾಧ್ಯಾಪಕ ಡಾ. ಮಂಜುನಾಥ ಭಜಂತ್ರಿ ಹೇಳಿದರು.

ನಗರದ ಡಿಮ್ಹಾನ್ಸ್​ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಸುಗಮ್ಯ ಯಾತ್ರಾ ಕಾರ್ಯಕ್ರಮದಡಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ವಿಶೇಷ ಚೇತನ ಕಲ್ಯಾಣ ಅಧಿಕಾರಿ ಕೆ. ಜಗದೀಶ, ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ ಮಾತನಾಡಿದರು. ಡಿಮ್ಹಾನ್ಸ್​ ಮನೋ ವೈದ್ಯಕಿಯ ಸಮಾಜಕಾರಿ ವಿಭಾಗದ ಅಶೋಕ ಕೋರಿ, ಡಾ. ಗಾಯತ್ರಿ ಹೆಗಡೆ, ರವೀಂದ್ರ ಹುಬ್ಬಳ್ಳಿ, ಇತರರು ಇದ್ದರು. ಡಾ. ಮೋಹನ ತಂಬದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net