

ಮಹಾಲಿಂಗಪುರ: ಸರ್ಕಾರಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟ ಕಾಯ್ದುಕೊಂಡು ಪ್ರಾಮಾಣಿಕವಾಗಿ ಕಾಮಗಾರಿಯನ್ನು ನಡೆಸಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮಾತನಾಡಿದ ಅವರು, ಸಾರ್ವಜನಿಕರು ಕೂಡಾ ತಮ್ಮ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿ ನೀಡಬೇಕು. ಅಲ್ಲದೆ ಕಾಯ್ದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಹಂತ ನಾಲ್ಕರ ಅಡಿಯಲ್ಲಿ ಶೇ.5 ರಷ್ಟು ಪ್ರೋತ್ಸಾಹ ಧನದಡಿ ರೂ.8 ಲಕ್ಷಗಳ ವೆಚ್ಚದಲ್ಲಿ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆ ನಿರ್ಮಾಣ ಮತ್ತು 5 ಲಕ್ಷ ರೂ.ಗಳ ವೆಚ್ಚದಲ್ಲಿ ಮಾದರ ಚೆನ್ನಯ್ಯ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿ ಮತ್ತು 2022-23 ಸಾಲಿನ ಪುರಸಭೆ ನಿ ಅಡಿಯಲ್ಲಿ 8.5 ಲಕ್ಷರೂ.ಗಳ ವೆಚ್ಚದಲ್ಲಿ ಕೆಂಗೇರಿಮಡ್ಡಿಯ ಈದ್ಗಾ ಮೈದಾನದಿಂದ ಕೋಡಿಹಾಳ ರಸ್ತೆ ಬದಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ ಮತ್ತು 2022-23 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ವಿವೇಕ ಕೊಠಡಿಗಳ ಅನುದಾನದಡಿ 27.80 ಲಕ್ಷ ರೂ.ಗಳ ವೆಚ್ಚದ ಸ್ಥಳೀಯ ಕೆಇಬಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಉದ್ಘಾಟನೆ ನೆರವೇರಿಸಿದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರಮನ್ ಅಬ್ದುಲ್‌ರಜಾಕ ಬಾಗವಾನ, ಮುಖ್ಯಾಧಿಕಾರಿ ನಾಮದೇವ ಲಮಾಣಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ಸಜನಸಾಬ ಪೆಂಡಾರಿ, ಮುಖಂಡರಾದ ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ಜಿ.ಎಸ್.ಗೊಂಬಿ, ಸುನೀಲಗೌಡ ಪಾಟೀಲ,ಶಿವಾನಂದ ಅಂಗಡಿ, ಅಧಿಕಾರಿಗಳಾದ ಎಸ್. ಎನ್ .ಪಾಟೀಲ, ಎಸ್. ಎಂ. ಕಲಬುರ್ಗಿ ಮುಂತಾದವರು ಇದ್ದರು.