ಉದ್ಯಮ ನಡೆಸಲು ಮಹಿಳೆ ಮುಂದಾಗಲಿ

SIDDAPUR SUMATI
Published on

ಸಿದ್ದಾಪುರ: ಮಹಿಳೆಯರಿಗೆ ಉದ್ಯಮ ನಡೆಸಲು ಇಂದು ವಿಫುಲವಾದ ಅವಕಾಶಗಳಿವೆ. ಅಗತ್ಯವಿರುವ ಉದ್ಯಮ ಮಾಡುವುದರಿಂದ ಯಶಸ್ಸು ಖಂಡಿತ. ಮಹಿಳೆಯರು ಸಮಯ ಹೊಂದಿಸಿಕೊಂಡು ಉದ್ಯಮ ನಡೆಸಲು ಮುಂದೆ ಬರಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ. ಹೇಳಿದರು.

ಪಟ್ಟಣದ ಮುರುಘರಾಜೇಂದ್ರ ಅಂಧರ ಶಾಲೆಯ ಸಭಾಂಗಣದಲ್ಲಿ ಆಶಾಕಿರಣ ಸಂಸ್ಥೆ ಸಿದ್ದಾಪುರ, ಲಯನ್ಸ್ ವೃತ್ತಿ ತರಬೇತಿ ಕೇಂದ್ರ ಹಾಗೂ ಕೃಷಿ ಇಲಾಖೆ ಸಿದ್ದಾಪುರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸುಮತಿ ಉದ್ಯಮಶೀಲತಾ ಮಹಿಳಾ ಸ್ವಸಹಾಯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಮಹಿಳೆಯರು ಉದ್ಯಮ ನಡೆಸಲು ಮುಂದೆ ಬರಬೇಕು. ಉದ್ಯಮ ನಡೆಸುವುದರಿಂದ ಉದ್ಯೋಗವೂ ಸಿಕ್ಕಂತಾಗುತ್ತದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ, ಉಪಾಧ್ಯಕ್ಷ ಸಿ.ಎಸ್. ಗೌಡರ್, ಶಾಮಲಾ ಹೆಗಡೆ, ಕೃಷಿ ಇಲಾಖೆಯ ರಾಧಿಕಾ, ಉದಯ ಮಾತನಾಡಿದರು. ಸಂಘದ ಸದಸ್ಯರಾದ ಉಮಾ ನಾಯಕ, ವಿದ್ಯಾ ದೋಶೆಟ್ಟಿ, ಪೂರ್ಣಿಮಾ ಶಾನಭಾಗ, ವಿಷಯಾ ಶಾನಭಾಗ, ವೀಣಾ ಶೇಟ್, ಸುಜಾತಾ ಭಟ್ಟ, ಲೀಲಾವತಿ ಗೌಡರ್, ಇತರರಿದ್ದರು.

ಸಂಘದ ಅಧ್ಯಕ್ಷೆ ಕವಿತಾ ಗೌಡರ್, ಮಧುಮತಿ ಶೀಗೆಹಳ್ಳಿ, ಸವಿತಾ ಹೆಗಡೆ ಹಾಗೂ ಸುಧಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net